??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಕೊಟ್ಟಿಗೆಹಾರ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ಮುರಿದು ಹೋದ ಕೌಗಾರ್ಡ್ಗೆ ಪ್ರವಾಸಿಗರೊಬ್ಬರ ಕಾಲು ಸಿಲುಕಿ ತೀವ್ರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಮೂಲದ ಪ್ರವಾಸಿಗ ಕಾರ್ತಿಕ್ ಗಾಯಗೊಂಡ ವ್ಯಕ್ತಿ. ಬಸ್ ನಿಲ್ದಾಣದಲ್ಲಿ ಜಾನುವಾರುಗಳು ಒಳಗಡೆ ಬರದಂತೆ ನೀರು ಸಾಗುವ ಚರಂಡಿಗೆ ಕೌಗಾರ್ಡ್ ಅಳವಡಿಸಿದ್ದು ಅದು ತುಕ್ಕು ಹಿಡಿದು ಮುರಿದು ಹೋಗಿದೆ. ಅಲ್ಲಿ ಕಂಬಿಯಲ್ಲಿ ಕಂದಕ ಏರ್ಪಟ್ಟಿದ್ಧು ಜನರು ಪ್ರವಾಸಿಗರು ಓಡಾಡಿದಾಗ ಕಂದಕ ಕಾಣದೇ ಕಾಲಿಟ್ಟು ಅಪಾಯ ತಂದುಕೊಳ್ಳುತ್ತಿದ್ದಾರೆ.

ಕೊಟ್ಟಿಗೆ ಹಾರ ಪ್ರವಾಸಿ ತಾಣವಾಗಿದ್ದು ಇಲ್ಲಿಗೆ ರಾಜ್ಯದ ಎಲ್ಲಾ ಬಸ್ ಗಳು ಬರುತ್ತವೆ. ಹೊರನಾಡು, ಧರ್ಮಸ್ಥಳ, ಬೇಲೂರು, ಬಾಳೆಹೊನ್ನೂರು ಭಾಗಕ್ಕೆ ಹೋಗಲು ಜನರು ಈ ಬಸ್ ನಿಲ್ದಾಣದಲ್ಲಿ ಕಾಯುತ್ತಾರೆ.ಆದರೆ ಈ ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಪ್ರವಾಸಿಗರು ಕಾಲು ಮುರಿದುಕೊಂಡು ಸಾಗುವ ಪ್ರಸಂಗಗಳು ಎದುರಾಗುತ್ತಿವೆ.
ಇನ್ನು ಈ ಬಸ್ ನಿಲ್ದಾಣದಲ್ಲಿ ಬೀಡಾಡಿ ದನಗಳು ರಾತ್ರಿ ಹೊತ್ತು ಮಲಗಿ ಸಗಣಿ ಹಾಕಿ ಪರಿಸರ ಮಲಿನಗೊಳಿಸುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ನಿಲ್ದಾಣದ ತಡೆಗೋಡೆ ಕುಸಿದಿದ್ದರೂ ಅದನ್ನು ಕೂಡ ಸರಿಪಡಿಸದೇ ಅಲ್ಲಿಯೇ ಬಿಡಲಾಗಿದೆ. ಬಸ್ ನಿಲ್ದಾಣದ ಒಳಗೆ ಸಂಚಾರ ನಿಯಂತ್ರಕರ ಕೊಠಡಿಯಿದ್ದು ಅದು ಹಗಲು ರಾತ್ರಿ ಟಿಸಿ ಇಲ್ಲದಿದ್ದರೂ ತೆರೆದಿರುತ್ತದೆ. ಇಲ್ಲಿ ಹಗಲು ಮಾತ್ರ ಸಂಚಾರ ನಿಯಂತ್ರಕರಿರುವುದರಿಂದ ಅವರು ಸಂಜೆ ಕರ್ತವ್ಯ ಮುಗಿಸಿ ಹೋದರೂ ಟಿಸಿ ಪಾಯಿಂಟ್ ತೆರೆದೇ ಇರುತ್ತದೆ. ಈ ಕೊಠಡಿಯಲ್ಲಿ ಸಿಸ್ಟಮ್ ಗಳು ಇದ್ದರೂ ಬಾಗಿಲು ಹಾಕದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಸಂಚಾರ ನಿಯಂತ್ರಕರ ಸೀಲು ಮಾತ್ರ ಬಸ್ ನಿರ್ವಾಹಕರು ಟಿಸಿ ಇಲ್ಲದಿದ್ದರೂ ಬಳಸಿಕೊಂಡು ಮುಂದೆ ಸಾಗುತ್ತಾರೆ.ಯಾವುದೇ ನಿಯಮಗಳಾಗಲಿ ಇಲ್ಲಿ ಪಾಲನೆ ಇಲ್ಲದಂತಾಗಿದೆ.
ಇನ್ನು ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ವರದಿ : ಸಂತೋಷ್ ಅತ್ತಿಗೆರೆ


