ದಿನಾಂಕ 20 -10 -2024 ರ ಭಾನುವಾರ ಕೇರಳದ ಕ್ಯಾಲಿಕೆಟ್ ನ ಕೃಷ್ಣ ಮೆನೋನ್ ಒಳ ಕ್ರೀಡಾಂಗಣದಲ್ಲಿ ಇಂಟರ್ ನ್ಯಾಷನಲ್ ಶೋಟೋ ಕಾನ್ ಅಕಾಡೆಮಿ ಆಫ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮೂಡಿಗೆರೆಯ ಕರಾಟೆ ಸಂಸ್ಥೆಯಾದ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಟ್ರೆಡಿಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಸಂಸ್ಥೆಯ ತಂಡ ಸಮಗ್ರ ಪ್ರಶಸ್ತಿ ಗಳಿಸಿದೆ.
ಇಂಟರ್ ನ್ಯಾಷನಲ್ ಶೋಟೋ ಕಾನ್ ಅಕಾಡೆಮಿ ಆಫ್ ಇಂಡಿಯಾ ಸಂಸ್ಥೆ ವ್ಯವಸ್ಥಾಪಕರಾದ ಹಾನ್ಷಿ ಮನೋಜ್ ಮಹದೇವನ್ ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ವಿವಿಧ ರಾಜ್ಯಗಳಿಂದ ಸುಮಾರು 52 ವಿವಿಧ ಶೈಲಿಯ ಕರಾಟೆ ಪಟುಗಳು ಸ್ಪರ್ಧಿಸಿದ್ದರು. ಈ ಸ್ಪರ್ಧೆಗೆ ಸುಮಾರು 1500 ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.
ಮೂಡಿಗೆರೆಯ ಕರಾಟೆ ಸಂಸ್ಥೆಯಾದ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಟ್ರೆಡಿಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕರಾದ ಸೆನ್ಸಾಯ್ ರಾಚೇಂದ್ರನ್, ಸೆನ್ ಸಾಯ್ ಬೇಬಿಲತ, ಸೆನ್ ಸಾಯ್ ಪೂಜಿತ್ ರಾಜೇಂದ್ರನ್ ಹಾಗು ಸೆನ್ಸಾಯ್ ಅಶ್ವಿನಿಚಂದ್ರ ಇವರಲ್ಲಿ ತರಬೇತಿ ಪಡೆದ ಸುಮಾರು 43 ಕರಾಟೆ ಪಟುಗಳು ಸ್ಪರ್ಧಿಸಿ ವೈಯುಕ್ತಿಕ ಕಥಾ ಕಲರ್ ಬೆಲ್ಟ್, ಬ್ರೌನ್ ಬೆಲ್ಟ್ ಹಾಗೂ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿ 12 ಚಿನ್ನ 14 ಬೆಳ್ಳಿ 17 ಕಂಚಿನ ಪದಕಗಳನ್ನು ಪಡೆಯುವುದರೊಂದಿಗೆ ರಾಷ್ಟ್ರಮಟ್ಟದಲ್ಲಿ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.



