sanad 2

 

 

ಅಕ್ರೋಬರ್ 20 ಕೇರಳದ ಕ್ಯಾಲಿಕೆಟ್ ನ ಕೃಷ್ಣ ಮೆನೋನ್ ಒಳ ಕ್ರೀಡಾಂಗಣದಲ್ಲಿ ಇಂಟರ್ ನ್ಯಾಷನಲ್ ಶೋಟೋ ಕಾನ್ ಅಕಾಡೆಮಿ ಆಫ್ ಇಂಡಿಯಾ ಸಂಸ್ಥೆ ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮೂಡಿಗೆರೆ ಎಂಇಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸನದ್ ಶರೀಫ್ ಬ್ರೌನ್ ಬೆಲ್ಟ್ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ ಸುಮಾರು  1500 ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.

ಬೆಳ್ಳಿ ಪದಕ ಗಳಿಸಿದ ಸನದ್ ಅವರು ಮೂಡಿಗೆರೆ ಹಾಸಿಗೆ ವ್ಯಾಪಾರಿಗಳಾದ ಮತ್ತು ಸಚೇತನ ಯುವ ಸಂಘದ ಮಾಜಿ ಅಧ್ಯಕ್ಷರಾದ ಶರೀಫ್ ಮತ್ತು ಶಮಾ ದಂಪತಿಗಳ ಪುತ್ರ.

ಇವರು ಮೂಡಿಗೆರೆಯ  ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಟ್ರೆಡಿಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕರಾದ ಸೆನ್ಸಾಯ್ ರಾಚೇಂದ್ರನ್, ಸೆನ್ ಸಾಯ್ ಬೇಬಿಲತ, ಸೆನ್ ಸಾಯ್ ಪೂಜಿತ್ ರಾಜೇಂದ್ರನ್ ಹಾಗು ಸೆನ್ಸಾಯ್ ಅಶ್ವಿನಿಚಂದ್ರ ಇವರಲ್ಲಿ ತರಬೇತಿ ಪಡೆದಿರುತ್ತಾರೆ.

 

ಸನದ್ ಅವರ ಸಾಧನೆಗೆ ಮೂಡಿಗೆರೆ ಎಂಇಎಸ್ ಶಾಲೆ ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ