ಮೂಡಿಗೆರೆ ತಾಲ್ಲೂಕು ಬೈದುವಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ಶ್ರೀ ತ್ರಿಪುರಾಂತಕೇಶ್ವರ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೈದುವಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಬೈದುವಳ್ಳಿ ಮಿಟ್ಟಿ ಬ್ರದರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮೇ 15 ರಿಂದ 17ರವರೆಗೆ ಮೂರು ದಿನಗಳ ಕಾಲ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳು ಭಾಗವಹಿಸಿದ್ದವು.

ಕ್ರೀಡಾಕೂಟವನ್ನು ಊರುಬಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಂ. ರವೀಂದ್ರ ಬಾಳೆಗದ್ದೆ ಉದ್ಘಾಟಿಸಿದರು.
ಉಪಾಂತ್ಯಕ್ಕೆ ನಾಲ್ಕು ತಂಡಗಳು ಆಯ್ಕೆಯಾಗಿದ್ದವು. ಅಂತಿಮವಾಗಿ ಪೈನಲ್ ಪಂದ್ಯದಲ್ಲಿ ಮಿಟ್ಟಿ ಬ್ರದರ್ಸ್ ಬೈದುವಳ್ಳಿ ಹಾಗೂ ಗೋಲ್ಡನ್ ವಾರಿಯರ್ಸ್ ಚನ್ನಡ್ಲು ಬಾಳೂರು ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಚನ್ನಡ್ಲು ತಂಡ ನಿಗದಿತ ನಾಲ್ಕು ಒವರ್ ಗಳಲ್ಲಿ 33 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮಿಟ್ಟಿ ಬ್ರದರ್ಸ್ ತಂಡ ರೋಚಕ ಹಣಾಹಣಿಯಲ್ಲಿ ಅಂತಿಮ ಓವರ್ ನಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಉತ್ತಮ ಆರಂಭ ಪಡೆದರು ಒಂದೆಡೆ ನಿರಂತರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಿಟ್ಟಿ ಬ್ರದರ್ಸ್ ತಂಡಕ್ಕೆ ನಾಯಕ ಪುನೀತ್ ಗೌಡ ಆಸರೆಯಾಗಿ ನಿಂತರು, ಸಿಕ್ಸ್ ಮತ್ತು ಫೋರ್ ಗಳ ಮೂಲಕ ನೆರೆದಿದ್ದ ಸ್ಥಳೀಯ ಪ್ರೇಕ್ಷಕರನ್ನು ರಂಜಿಸಿದರು. ಆಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಗೋಲ್ಡನ್ ವಾರಿಯರ್ಸ್ ಚೆನ್ನಡ್ಲು ತಂಡ ಎರಡನೇ ಸ್ಥಾನಕ್ಕೆ ಪಡೆಯಿತು.

ಗೋಲ್ದನ್ ವಾರಿಯರ್ಸ್ ಗೋಣಿಬೀಡು ತಂಡ ಮೂರನೇ ಸ್ಥಾನ ಮತ್ತು

ಬೈರವ ವಾರಿಯರ್ಸ್ ತಂಡಗಳು ನಾಲ್ಕನೇ ಸ್ಥಾನ ಪಡೆದವು.
ಆಲ್ರೌಂಡ್ ಆಟದ ಮೂಲಕ ಗಮನ ಸೆಳೆದ ಪುನೀತ್ ಗೌಡ ಬೈದುವಳ್ಳಿ ಸರಣಿ ಪುರಷೋತ್ತಮ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಕೆರೆಹಿತ್ಲು ಎಸ್ಟೇಟ್ ಮಾಲೀಕರು ಮತ್ತು ಕ್ರೀಡಾಂಗಣದ ಪ್ರಾಯೋಜಕರಾದ ಬ್ಲಾನಿ ರೋಡ್ರಿಗೆಸ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀಮತಿ ಪುಷ್ಪರಾಜು, ಸ್ಥಳೀಯ ಗ್ರಾಮಸ್ಥರು, ದಾನಿಗಳು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು. ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸಿದವರನ್ನು ಗೌರವಿಸಲಾಯಿತು. ವಿಜೇತ್ ಬಾಳೂರು ಕಾರ್ಯಕ್ರಮ ನಿರೂಪಿಸಿದರು.

ಬೈದುವಳ್ಳಿ ತ್ರಿಪುರಾಂತಕೇಶ್ವರ ಕ್ರಿಕೆಟರ್ಸ್ ಬಳಗದವರು ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿ ಮೆಚ್ಚುಗೆ ಗಳಿಸಿದರು.



