sfasdf_page-0001

 

 

ಚಿಕ್ಕಮಗಳೂರು ರೋಟರಿಕ್ಲಬ್‍ನ 2026-27ನೆಯ ಸಾಲಿನ ಅಧ್ಯಕ್ಷರಾಗಿ ಎನ್.ಚಿದಾನಂದ ಮತ್ತು ಕಾರ್ಯದರ್ಶಿಯಾಗಿ ಸಿ.ಎ.ಆದರ್ಶ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಿರಿವಾಸೆಯ ಅವರೇಬೀಳು ವಂಶದ  ಚಿದಾನಂದ ಪದವೀಧರರು. 2022ರಲ್ಲಿ ರೋಟರಿ ಆಂದೋಲನವನ್ನು ಸೇರಿ ಚಿಕ್ಕಮಗಳೂರು ರೋಟರಿ ನಿರ್ದೇಶಕರಾಗಿ-ಉಪಾಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿದವರು.  ಕಾಫಿ ಬೆಳೆಗಾರ ಎಸ್.ಎಂ.ನಂಜುಂಡೇಗೌಡ ಮತ್ತು ಕುಮುದಾ ಅವರ ಪುತ್ರ.  ಪ್ರಸ್ತುತ ಕಾಫಿ ಬೆಳೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವರ್ತಕ ಕುಟುಂಬದ ಆದರ್ಶ್ ಸಿ.ಎ.ಪದವಿಯ ನಂತರ ದಶಕಗಳಿಂದ ಛಾರ್ಟೆಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಚಿಕ್ಕಮಗಳೂರು ರೋಟರಿ ಕ್ಲಬ್ ಮೂಲಕ ರೋಟರಿ ಆಂದೋಲನವನ್ನು 2022ರಲ್ಲಿ ಪ್ರವೇಶಿಸಿ ನಿರ್ದೇಶಕ, ಎರಡು ಅವಧಿಯ ಖಜಾಂಚಿಯಾಗಿ ಕಾರ್ಯನಿರ್ವಹಿಸಿದವರು.  ಆದರ್ಶ್ ಫರ್ನಿಷಿಂಗ್ ಮಾಲೀಕ ಕೆ.ವಿ.ಸುಧೀರ್ ಮತ್ತು ಡಾ.ನಿಧಿ ಪುತ್ರ. ಪ್ರಸ್ತುತ ಲೆಕ್ಕ ಪರಿಶೋಧಕರಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿದಾನಂದ ನೇತೃತ್ವದ ನೂತನ ತಂಡ ಜುಲೈ 4ರ ಬುಧವಾರ ಸಂಜೆ 6.30ಕ್ಕೆ ಸೇವಾದೀಕ್ಷೆ ಪಡೆಯಲಿದ್ದಾರೆ.  ನಗರದ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರೋಟರಿ ಜಿಲ್ಲಾ ವಿಶ್ರಾಂತ ರಾಜ್ಯಪಾಲ ಡಿ.ಎಸ್.ರಘು ಪ್ರಮಾಣವಚನ ಬೋಧಿಸುವರು.  ಸಹಾಯಕ ರಾಜ್ಯಪಾಲ ಕೆ.ಬಿ.ದ್ವಾರಕನಾಥಬಾಬು ಮತ್ತು ವಲಯನಾಯಕ ಎನ್.ಶ್ರೀವಾತ್ಸವ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು.

ಪ್ರಸಕ್ತಸಾಲಿನ ಪದಾಧಿಕಾರಿಗಳು :  ಎನ್.ಚಿದಾನಂದ ಅಧ್ಯಕ್ಷ, ಸಿ.ಎ.ಆದರ್ಶ ಕಾರ್ಯದರ್ಶಿ, ಎನ್.ಪಿ.ಲಿಖಿತ್ ನಿಕಟಪೂರ್ವ ಅಧ್ಯಕ್ಷ, ಎಂ.ಎಸ್.ಸುಧೀರ್ ಖಜಾಂಚಿ, ಫಣೀಂದ್ರ ನಾಡಿಗ ಉಪಾಧ್ಯಕ್ಷ, ಬಿ.ಎಸ್.ವಿಧೇಯ ಸಹಕಾರ್ಯದರ್ಶಿ, ಡಾ.ಕೆ.ಟಿ.ಚೇತನಕುಮಾರ ಸಾರ್ಜೆಟ್ ಎಟ್ ಆರ್ಮಸ್.

ನಿರ್ದೇಶಕರು:  ಎಂ.ಎಲ್.ಸುಜೇತ ತಂಡಸೇವೆ, ಟಿ.ಡಿ.ತಿಮ್ಮಯ್ಯ ವೃತ್ತಿಸೇವೆ, ಎಂ.ಆರ್.ಕಿರಣ್ ಸಮುದಾಯಸೇವೆ, ಕೆ.ಆರ್.ಸನತ್ ಅಂತರರಾಷ್ಟ್ರೀಯ ಸೇವೆ, ಡಿ.ಎಸ್.ಪವನ್ ಯುವಸೇವೆ, ಕೆ.ಬಿ.ಅನಂತೇಗೌಡ ಮತ್ತು ಹರ್ಷಿತ್‍ವಸಿಷ್ಠ ಕಾರ್ಯನಿರ್ವಹಿಸುವರೆಂದು ರೋಟರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ