suddi-8 (4)

 

 

ಜಾನಪದ ಸೊಗಡು ಉಳಿಸುವುದು ನಮ್ಮ ಪೂರ್ವಿಕರ ಅಸ್ತಿತ್ವವನ್ನು ಉಳಿಸಿದಂತೆ, ನಮ್ಮ ಜಾನಪದ ಉಳಿವುದರಿಂದ, ನಮ್ಮ ಸಂಸ್ಕøತಿಯು ಉಳಿಯಲಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಗೌರವಾಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಹೇಳಿದರು.

ಜ್ಯೋತಿನಗರ ಸಮೀಪದ ಡಾ|| ಬಿ.ಆರ್.ಅಂಭೇಡ್ಕರ್ ವಸತಿ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿ ಷತ್ ಯುವಘಟಕದಿಂದ ಆಯೋಜಿಸಿದ್ಧ ‘ಜಾನಪದ ಅರಿವು ಮತ್ತು ಉಳಿವು’ ಕಾರ್ಯಕ್ರಮವನ್ನು ಮಂ ಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಜಾನಪದ ಕಲೆಗಳು ಮನುಷ್ಯತ್ವವನ್ನು ಕಲ್ಪಿಸುತ್ತದೆ. ಪ್ರಸ್ತುತ ಮೂಲ ಜಾನಪದ ಗೀತೆಗಳು ನಶಿಸಿ ಹೋಗಿದ್ದು, ಹಳೆಯ ಸಾಹಿತ್ಯ ವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಜಾನಪದ ಎನ್ನುವುದು ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ನಮ್ಮ ಮಣ್ಣಿನ ಗುಣ ಮತ್ತು ಪೂರ್ವಜರ ಬದುಕಿನ ಅನುಭವಗಳ ಜೀವಂತ ಸಾಕ್ಷಿಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಹಾಗೂ ಮೊಬೈಲ್ ಸಂಸ್ಕøತಿಗೆ ಮರುಳಾಗಿ ಯುವ ಪೀಳಿಗೆಯು ನಮ್ಮ ಮೂಲ ಸಾಂಸ್ಕೃತಿಕ ಬೇರುಗಳನ್ನು ಮರೆಯುತ್ತಿರುವುದು ಕಳವಳಕಾರಿ ಎಂದರು.

ಮಕ್ಕಳು ಕೇವಲ ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಕಲೆ ಮತ್ತು ಸಾಹಿತ್ಯದ ಕಡೆಗೂ ಒಲವು ಬೆಳೆಸಿಕೊಳ್ಳಬೇಕು. ಪಾಲಕರು ಸಹ ತಮ್ಮ ಇಷ್ಟದಂತೆ ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡದೆ, ಅವರಲ್ಲಿ ಅಡಗಿರುವ ಕಲಾತ್ಮಕ ಆಸಕ್ತಿಗಳಿಗೆ ನೀರೆರೆಯಬೇಕು ಎಂದು ಕರೆ ನೀಡಿದರು.

ಕ.ಜಾ.ಪ ತಾಲ್ಲೂಕು ಅಧ್ಯಕ್ಷ ಸಚಿನ್‍ಸಿಂಗ್ ಮಾತನಾಡಿ ಜಾನಪದ ಸಾಹಿತ್ಯವು ಪೂರ್ವಿಕರ ತಲೆಮಾ ರುಗಳಿಂದ ಮೌಖಿಕ ಪರಂಪರೆಯ ಮೂಲಕ ಹರಿದು ಬಂದಿರುವ ಒಂದು ಅದ್ಭುತ ಜ್ಞಾನ ಭಂಡಾರವಾಗಿ ದೆ. ಹಳ್ಳಿಗರ ನಿತ್ಯ ಜೀವನದ ಶ್ರಮ, ಸೌಹಾರ್ದತೆ, ಪ್ರಕೃತಿ ಪ್ರೇಮ ಮತ್ತು ಮಾನವೀಯ ಮೌಲ್ಯಗಳು ಜಾನ ಪದ ಗೀತೆಗಳಲ್ಲಿ ಹಾಸುಹೊಕ್ಕಾಗಿವೆ ಎಂದರು.

ಇಂದಿನ ಜಾಗತೀಕರಣದ ಅಬ್ಬರದಲ್ಲಿ ನಮ್ಮ ಗ್ರಾಮೀಣ ಕಲೆಗಳು ಮೂಲೆಗುಂಪಾಗುತ್ತಿದ್ದು, ಇವುಗಳ ಮರುಶೋಧನೆ ಮತ್ತು ಸಂರಕ್ಷಣೆ ಅತ್ಯಗತ್ಯವಾಗಿದೆ. ಜಾನಪದ ಝೇಂಕಾರದಂತಹ ಕಾರ್ಯಕ್ರಮಗಳು ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮತ್ತು ಸಾಂಸ್ಕøತಿಕ ಸಾಮರಸ್ಯವನ್ನು ಮೂಡಿಸಲು ನೆರವಾಗುತ್ತವೆ ಎಂದರು.

ಈ ಸಂದರ್ಭದಲ್ಲಿ ಕ.ಜಾ.ಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ನಗರ ಗೌರವಾಧ್ಯಕ್ಷ ಎಂ.ವಿ.ಚಂದ್ರಮೂರ್ತಿ, ವಸತಿ ಶಾಲೆ ಪ್ರಾಂಶುಪಾಲ ಪಿ.ಆರ್.ಮಧುಸೂಧನ್, ನಗರಾಧ್ಯಕ್ಷ ಮಹೇಶ್ ಮೇದರ್, ಮಹಿಳಾಧ್ಯಕ್ಷೆ ನೇತ್ರ ಅಣ್ಣಪ್ಪ, ಕಾರ್ಯದರ್ಶಿ ಶೈಲಾ ಬಸವರಾಜ್, ಮುಖಂಡರಾದ ಬಿಸಲೇಹಳ್ಳಿ ಸೋಮಶೇಖರ್, ಡಿಂಪನ್  ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ