leed suddi-1(B)

 

 

ಮೂಡಿಗೆರೆ  ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕ್ಯೂ ನಲ್ಲಿ ನಿಂತಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯಾವುದೇ ಪೊಲೀಸರಿಲ್ಲಾ ಸಾರ್ವಜನಿಕರು ಅಚ್ಚರಿಯಿಂದ ಶಾಲಾ ಆವರಣ ದಿಟ್ಟಿಸಿ ಅಲ್ಲೆ ನಿಂತು ಕೊಂಡು ಏನು ಬಾರಿ ಕ್ಯೂ ಇದೆಯಲ್ಲಾ ಎಂದು ಮಾತನಾಡಿಕೊಳ್ಳುತ್ತಿದ್ದ ದೃಷ್ಯ ಕಂಡು ಬಂದಿದ್ದು

ಶಾಲಾ ಸಂಸತ್ತು ಚುನಾವಣೆ ಗುರುವಾರ ಬೆಳಿಗ್ಗೆ 10-30 ರಿಂದ ಗಂಟೆಗೆ ಪ್ರಾರಂಭವಾದ ಮತದಾನ ಮಧ್ಯಾಹ್ನ 1 ಗಂಟೆಯವರೆಗೂ ರ ವರಗೆ ನಡೆದ ಮತದಾನದಲ್ಲಿ 300 ವಿದ್ಯಾರ್ಥಿಗಳು 23 ಜನ ಶಿಕ್ಷಕರು ಒಟ್ಟು 323 ಜನ ಸಾಲುಗಟ್ಟಿ ನಿಂತು ಮತದಾನ ಮಾಡಿದರು.

ಉಪ ಪ್ರಾಂಶುಪಾಲರು ಚುನಾವಣಾಧಿಕಾರಿ ಡಾ.ಜಗದೀಶ್ ನಾಯ್ಕ್ ಪತ್ರಿಕೆಯೊಂದಿಗೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸುವುದರೊಂದಿಗೆ ರಾಜಕಾರಣ ಎಂದರೇ ಏನು ಎಂಬುವುದನು ಅರಿವು ಮೂಡಿಸುವುದರೊಂದಿಗೆ ಮತದಾನದ ಮಹತ್ವವನ್ನು ತಿಳಿಸುವುದೆ ಈ ಸಂಸತ್ ಚುನಾವಣೆಯ ಮೂಲ ಉದ್ದೇಶವಾಗಿದೆ. ಪ್ರಜಾ ತಂತ್ರದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ತಿಳಿಸುವುದು ಭಾವಿ ಪ್ರಜೆಗಳಾಗುವ ಮಕ್ಕಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮಾದರಿ ಚುನಾವಣ ನೀತಿ ಸಂಹಿತೆ ಬಗ್ಗೆ ಜಾಗೃತಿ ಮುಡಿಸುವುದು ಇದರ ಉದ್ದೇಶ ಎಂದು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿಗೆದ್ದ ವಿದ್ಯಾರ್ಥಿಗಳಿಗೆ 1 ವರ್ಷಗಳ ಕಾಲ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಗೃಹಸಚಿವರು, ಶಿಕ್ಷಣಮಂತ್ರಿ, ಆಹಾರ ಮಂತ್ರಿ, ಸೇರಿದಂತೆ ಮಂತ್ರಿ ಮಂಡಲವನ್ನು ಇನ್ರ್ನೆಂದು ವಾರದಲ್ಲಿ ರಚಿಸಿ ಪ್ರಮಾಣ ವಚನ ಭೋದಿಸಲಾಗುವುದು, ವಿದ್ಯಾರ್ಥಿಗಳು ತಮಗೇನಾದರೂ ತೊಂದರೆಗಳಾದರೆ ಅಥವಾ ವಿಚಾರಗಳನ್ನು ತಿಳಿಸಲು ಶಿಕ್ಷಕರಲ್ಲಿ ಮುಜುಗುರ ಪಟ್ಟುಕೊಳ್ಳದೆ ಆಯ್ಕೆಯಾಗಿರುವ ಮಂತ್ರಿಗಳ ಮೂಲಕ ತವ್ಮ್ಮಗಮನಕ್ಕೆ ತರಬಹುದಾಗಿದೆ ಎಂದರು

ಇಂದು ನಡೆದ ಚುನಾವಣೆ ಯಲ್ಲಿ 15 ವಿದ್ಯಾರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ದಿಸಿದ್ದು ಕು. ಪ್ರಶಾಂತ ನಾಯ್ಕ 49 ಮತ ಪಡೆದು ಪ್ರಥಮ ಸ್ಥಾನ ಪಡೆದರೆ, ಮನ್ವಿತ್ ಟಿ 43 ಮತ ಪಡೆದು ದ್ವಿತಿಯ ಸ್ಥಾನ, ಪ್ರತಿಭಾ ಸಿ.ಆರ್ 36 ಮತ ಪಡೆದು ತೃತಿಯ ಸ್ಥಾನ ಗಳಿಸಿದ್ದು. ಇನ್ನುಳಿದ 12 ವಿಧ್ಯಾರ್ಥಿಗಳ ಮತಗಳನ್ನು ಎಣಿಕೆ ಮಾಡಿದ್ದು ಅವರಿಗೆ ಬಿದ್ದ ಮತಗಳ ಪ್ರಕಾರ ಸ್ಥಾನಗಳನ್ನು ಆಯ್ಕೆಮಡಲಾಗುವುದು ಎಂದು ಮಾಹಿತಿ ನೀಡಿದರು.

ಉಪಾಪ್ರಾಂಶುಪಾಲರಾದ ಡಾ. ಜಗದೀಶ ನಾಯ್ಕ. ಎಂ ರವರು ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರೆ, ,ಸಹಾಯಕ ಚುನಾವಣ ಅಧಿಕಾರಿಗಳಾಗಿ ರವಿಕುಮಾರ್ ಎಚ್.ಎಸ್. ಮತ್ತು ಶ್ರಿಮತಿ ಭಾನುಪ್ರೀಯ,ಪಿಆರ್‍ಒಅಧಿಕಾರಿಯಾಗಿ ಹಿರಿಯ ಶಿಕ್ಷಕಿಯರಾದ ಶ್ರಿಮತಿ ರೂಕ್ಸನ ರ್ವೀನ್ ಮತ್ತು ರೇಣುಕಾ ಡಿ. ಪಿ, ಎ ಪಿ ಆರ್ ಒ ಆಗಿ ಶ್ರೀಮತಿ ಮಣಿ ಬಿ.ಇ. ಮತ್ತು ಶ್ರೀ ಮತಿ ಸವಿತ ಹೆಚ್.ವಿ. ಪೆÇೀಲಿಂಗ್ ಅಧಿಕಾರಿಗಳಾಗಿ ಶ್ರೀಮತಿ ವಿಮಲಾಕ್ಷಿ, ಶ್ರೀಮತಿ ಲತಾ ಶ್ರೀಮತಿ ಸುಜಾತ ಕೆ.ಎಂ.ಶ್ರಿಮತಿ ವಿಮಲಾ, ಚಂದ್ರಶೆಟ್ಟಿ, ಶ್ರೀಮತಿ ನೈಮಾ ಅಕ್ತರ್, ಶ್ರೀಮತಿ ಶೃತಿ, ಮನೋಜ್ ಬಡಿಗೇರ್, ಶ್ರೀಮತಿ ರೇಣುಕಮ್ಮ,ಕೌಶಿಕ್, ಶ್ರೀಮತಿ ಪೂರ್ಣಿಮಾ ಚುನಾವಣೆಯ ಕಾರ್ಯವನ್ನು ನಿರ್ವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ