ಟಿ ರವಿಯವರು ಹೇಳಿರುವ ನಕ್ಷಲರು ಹಾಸ್ಟೆಲ್ ನಲ್ಲಿ ತಂಗುತಾರೆ ಅನ್ನುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಂಜುನಾಥ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಾಸ್ಟೆಲ್ ಗಳಲ್ಲಿ ವಿದ್ಯಾಭ್ಯಾಸಕ್ಕೆ ಬರುವ ಬಡ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಬರುವುದು. ಅವರು ನಕ್ಸಲರಾಗಲು ಬರುವವರಲ್ಲ ಅದನ್ನ ಸಿ ಟಿ ರವಿಯವರು ಮನಗಾಣಬೇಕು. ವಿದ್ಯಾರ್ಥಿಗಳನ್ನ ಅನುಮಾನ ದೃಷ್ಟಿಯಲ್ಲಿ ನೋಡಿ ಅವರ ವಿದ್ಯಾಭ್ಯಾಸದ ಭವಿಷ್ಯಕ್ಕೆ ಗಂಭೀರ ಪರಿಣಾಮ ಬೀರುವಂತ ಹೇಳಿಕೆ ನೀಡಿರುವುದು ಖಂಡನೀಯ.
ಹಾಸ್ಟೇಲ್ ಗಳಲ್ಲಿ ಎಲ್ಲ ಜಾತಿ ಧರ್ಮದರೂ ಬಡ ವಿದ್ಯಾರ್ಥಿಗಳು ಇದ್ದಾರೆ. ಸಿ.ಟಿ.ರವಿಯವರ ಹೇಳಿಕೆ ಬಡವರು ದಲಿತರ ಮೇಲೆ ಅವರಿಗೆ ಇರುವ ಪೂರ್ವಾಗ್ರಹ ಮತ್ತು ಅಸಡ್ಡೆಯ ಮನೋಭಾವನೆಗೆ ಸಾಕ್ಷಿಯಾಗಿದೆ. ಹಾಗೊಂದುವೇಳೆ ನಕ್ಸಲರು ಹಾಸ್ಟೆಲ್ ಗಳಲ್ಲಿ ತಂಗುತ್ತಾರೆ ಎಂಬುದಕ್ಕೆ ಸಿ.ಟಿ.ರವಿಯವರಿಗೆ ಮಾಹಿತಿ ಇದ್ದರೆ ಅವರನ್ನು ಪೊಲೀಸರಿಗೆ ಹಿಡಿದು ಕೊಡಬಹುದಿತ್ತಲ್ಲ. ಈ ತರದ ಹೇಳಿಕೆ ಸರಿಯಲ್ಲ ಈ ಹೇಳಿಕೆಯನ್ನು ಖಂಡಿಸುತ್ತೆನೆ. ಈ ಹೇಳಿಕೆಗೆ ಸಿ ಟಿ ರವಿಯವರು ಕ್ಷಮೆ ಯಾಚಿಸಬೇಕು ಎಂದು ಪಿ.ಕೆ. ಮಂಜುನಾಥ್ ಆಗ್ರಹಿಸಿದ್ದಾರೆ.


