November 2, 2026
;
23Mudigere2A

 

 

ರಾಜ್ಯದಲ್ಲಿ ನಡೆದ ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಪ.ಪಂ. ಉಪಾಧ್ಯಕ್ಷ ರಮೇಶ್ ಹೊಸಕೆರೆ, ಸದಸ್ಯ ಹಂಝಾ, ನಾಮಿನಿ ಸದಸ್ಯರಾದ ಸಿ.ಬಿ.ಶಂಕರ್, ಅಜ್ಮಲ್, ಹಳೇಮೂಡಿಗೆರೆ ಗ್ರಾ.ಪಂ. ಸದಸ್ಯ ಜುಬೇರ್, ತಾಲೂಕು ಕೆಡಿಪಿ ಸದಸ್ಯ ಸುರೇಂದ್ರ ಉಗ್ಗೇಹಳ್ಳಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಹರೀಶ್ ಸಬ್ಬೇನಹಳ್ಳಿ, ಮುಖಂಡರಾದ ರವಿ ಕುನ್ನಳ್ಳಿ, ಸುಧೀರ್, ಯಾಕೋಬ್, ಸುರೇಶ್ ಜೈನ್, ನವೀನ್, ಗಣೇಶ್ . ರುದ್ರಯ್ಯ, ಷಣ್ಮುಖಾನಂದ, ಸೋಮಣ್ಣ, ಲವಕುಮಾರ್ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *