crop insu 2 copy

 

 

2023-24 ನೇ ಸಾಲಿನ ಫಸಲ್ ಭೀಮಾ ಹವಾಮಾನ ಆಧಾರಿತ ಬೆಳೆವಿಮೆ ಮೊತ್ತವು ರೈತರ ಖಾತೆಗಳಿಗೆ ಜಮಾ ಆಗಿದೆ.

ಭತ್ತ, ಅಡಿಕೆ, ಕಾಳುಮೆಣಸು, ಮಾವು ಮುಂತಾದ ಬೆಳೆಗಳಿಗೆ 2023 ನೇ ಸಾಲಿನಲ್ಲಿ ಕಟ್ಟಿದ್ದ ಬೆಳೆವಿಮೆಗೆ ಸಂಬಂಧಿಸಿದಂತೆ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ರೈತರ ಖಾತೆಗಳಿಗೆ ವಿಮಾ ಮೊತ್ತ ಜಮೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೆ ಸುಮಾರು 63 ಕೋಟಿ ವಿಮೆ ಹಣ ರೈತರ ಖಾತೆಗಳಿಗೆ ಜಮೆ ಆಗಿದೆ ಎಂದು ತಿಳಿದುಬಂದಿದೆ.

ಕಾಳುಮೆಣಸಿಗೆ ಪ್ರತಿ ಎಕರೆಗೆ ರೂ. 7200 ಹಾಗೂ ಅಡಿಕೆಗೆ ಪ್ರತಿ ಎಕರೆಗೆ ಸುಮಾರು 22 ಸಾವಿರ ವಿಮೆ ಮೊತ್ತ ರೈತರಿಗೆ ಜಮೆ ಆಗಿದೆ.

ಬಹುತೇಕ ರೈತರ ಪೋಸ್ಟ್ ಆಫೀಸ್ ಖಾತೆಗಳು, ಡಿಸಿಸಿ ಬ್ಯಾಂಕ್ ಖಾತೆಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಿಗೆ ವಿಮೆ ಹಣ ಜಮೆ ಆಗಿದೆ.

ರೈತರ ಪಹಣಿಗಳ ಬೆಳೆ ಕಾಲಂನಲ್ಲಿ ಅಡಿಕೆ ಮತ್ತು ಕಾಳುಮೆಣಸು ಎಂದು ನಮೂದಾಗಿದ್ದರೆ ಮಾತ್ರ ವಿಮೆ ಹಣ ಜಮೆ ಆಗಿದೆ.

ತಮ್ಮ ಪಹಣಿಗಳಲ್ಲಿ ಬೆಳೆ ಕಾಲಂ ನಲ್ಲಿ ನಿಗದಿತ ಬೆಳೆಗಳ ಹೆಸರು ಇದ್ದು, ತೋಟಗಳಲ್ಲಿಯೂ ಸಹ ಆ ಬೆಳೆಗಳನ್ನು ಬೆಳೆದಿದ್ದೂ ಒಂದು ವೇಳೆ ವಿಮೆ ಕಟ್ಟಿದ ರೈತರ ಖಾತೆಗಳಿಗೆ ವಿಮೆ ಹಣ ಜಮಾ ಆಗದೇ ಇದ್ದರೆ ಸ್ಥಳೀಯ ತೋಟಗಾರಿಕಾ ಇಲಾಖೆಯಲ್ಲಿ ರೈತರು ವಿಚಾರಿಸಬಹುದಾಗಿರುತ್ತದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ