ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಹೋದರಿಯರಾದ ಸೀಮಾ (6), ರಾಧಿಕಾ (2) ಮೃತ ಮಕ್ಕಳು
ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ಘಟನೆ ನಡೆದಿದೆ.
ಮಧ್ಯಪ್ರದೇಶ ಮೂಲದ ಸುನೀತಾ ಎಂಬುವವರ ಮಕ್ಕಳು
ಕೂಲಿಗಾಗಿ ಮಧ್ಯಪ್ರದೇಶದಿಂದ ಬಂದು ತೋಟದ ಮನೆಯಲ್ಲಿದ್ದ ಕುಟುಂಬ
ಮಕ್ಕಳನ್ನ ಮನೆಯಲ್ಲೇ ಬಿಟ್ಟು ತೋಟದ ಕೆಲಸಕ್ಕೆ ಹೋಗಿದ್ದ ತಾಯಿ
ಸಂಜೆ ಮನೆಗೆ ಬಂದಾಗ ಮಕ್ಕಳು ಇಲ್ಲದ್ದನ್ನ ಕಂಡು ತಾಯಿ ಗಾಬರಿಯಾಗಿದ್ದು
ಕಾರ್ಮಿಕರು ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳ ಮೃತದೇಹ ಪತ್ತೆಯಾಗಿದೆ.
ಮಕ್ಕಳು ಆಟವಾಡುತ್ತಾ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ
ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಲೈನಿನ ಸಮೀಪದ ರಿಂಗ್ ಬಾವಿಗೆ ಯಾವುದೇ ಸುರಕ್ಷತೆ ಇಲ್ಲದೆ ಇದ್ದುದು ಘಟನೆಗೆ ಕಾರಣ ಎನ್ನಲಾಗಿದೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡು ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ




