2025-26ರ ಶೈಕ್ಷಣಿಕ ವರ್ಷಕ್ಕೆ ಸೈನಿಕ ಶಾಲೆಗೆ 6 ಮತ್ತು 9ನೇ ತರಗತಿ ಪ್ರವೇಶಕ್ಕೆ ನಡೆಸಲಾಗುವ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಭಾರತದಲ್ಲಿ ಒಟ್ಟು 33 ಸೈನಿಕ ಶಾಲೆಗಳಿವೆ. ಇವೆಲ್ಲವನ್ನೂ ನಿರ್ವಹಿಸುವ ಜವಾಬ್ದಾರಿ ಸೈನಿಕ್ ಸ್ಕೂಲ್ ಸೊಸೈಟಿಯ ಮೇಲಿದೆ. ಅದರ ವಿವರಗಳನ್ನು sainikschoolsociety. inನಲ್ಲಿ ಪರಿಶೀಲಿಸಬಹುದು.
ಸೈನಿಕ ಶಾಲೆಯ 6 ಮತ್ತು 9ನೇ ತರಗತಿಗಳಿಗೆ ಪ್ರವೇಶಕ್ಕಾಗಿ, ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ (AISSEE) ಉತ್ತೀರ್ಣರಾಗುವುದು ಅವಶ್ಯಕ. ಬಹು ಆಯ್ಕೆ ಪ್ರಶ್ನೆಗಳ ಮಾದರಿಯಲ್ಲಿ ಒಎಂಆರ್ ಶೀಟ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಭಾರತದಾದ್ಯಂತ 190 ನಗರಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಪರೀಕ್ಷೆಗೆ ಸಂಬಂಧಿಸಿದ ಯೋಜನೆ/ಅವಧಿ/ಮಾಧ್ಯಮ/ ಪಠ್ಯಕ್ರಮ, ಸೈನಿಕ ಶಾಲೆಗಳು/ ಹೊಸ ಸೈನಿಕ ಶಾಲೆಗಳ ಪಟ್ಟಿ ಮತ್ತು ಅವುಗಳ ತಾತ್ಕಾಲಿಕ ಪ್ರವೇಶ, ಸೀಟುಗಳ ಕಾಯ್ದಿರಿಸುವಿಕೆ, ಪರೀಕ್ಷಾ ನಗರಗಳು, ಉತ್ತೀರ್ಣ ಅವಶ್ಯಕತೆಗಳು, ಪ್ರಮುಖ ದಿನಾಂಕಗಳು ಇತ್ಯಾದಿಗಳನ್ನು https://nta.ac.in//https:// exams.nta.ac.in/AISSEE/ឥដ្ឋ ផ.
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 24.12.2024
ಅರ್ಜಿ ಸಲ್ಲಿಕೆಗೆ ಕೊನೇ ದಿನ: 13.01.2025 (ಸಂಜೆ 5.00 ಗಂಟೆಯವರೆಗೆ)
ವಯೋಮಿತಿ: ಸೈನಿಕ ಶಾಲೆಯ 6ನೇ ತರಗತಿಗೆ ລຳ, 31.03.2025
ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 10-11 ವರ್ಷಗಳು ಮತ್ತು 9, 13-14 ವರ್ಷವಾಗಿರಬೇಕು ಹಾಗೂ 5ನೇ ತರಗತಿಯಲ್ಲಿ ಉತ್ತೀರ್ಣರಾಗಿರುವುದು ಅವಶ್ಯಕ.
ಒಂಬತ್ತನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ
ಅಭ್ಯರ್ಥಿಯು 31.03.2025ಕ್ಕೆ 13 ರಿಂದ 15 ವರ್ಷದೊಳಗಿನವರಾಗಿರಬೇಕು ಮತ್ತು ಪ್ರವೇಶದ ಸಮಯದಲ್ಲಿ ಮಾನ್ಯತೆ ಪಡೆದ ಶಾಲೆಯಿಂದ ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಖಾಲಿ ಹುದ್ದೆಗಳ ಲಭ್ಯತೆಗೆ ಒಳಪಟ್ಟು ಒಂಬತ್ತನೇ ತರಗತಿಗೆ ಬಾಲಕಿಯರಿಗೆ ಪ್ರವೇಶ ಮುಕ್ತವಾಗಿದೆ. ವಯಸ್ಸಿನ ಮಾನದಂಡವು ಹುಡುಗರಂತೆಯೇ ಇರುತ್ತದೆ ಎಂದು ಮಾಹಿತಿ ಬುಲೆಟಿನ್‌ನಲ್ಲಿ ವಿವರಿಸಲಾಗಿದೆ.
ಪರೀಕ್ಷಾ ಶುಲ್ಕ: ಸಾಮಾನ್ಯ/ ಒಬಿಸಿ (ಎನ್ಸಿಎಲ್) / ರಕ್ಷಣಾ/ ಮಾಜಿ-ಸೈನಿಕರು: ರೂ. 800 ಎಸ್ಸಿ/ಎಸ್ಟಿ: ರೂ.650
ಶುಲ್ಕ ಪಾವತಿಸಲು ಕೊನೆಯ ದಿನಾಂಕ
14.01.2025 (ರಾತ್ರಿ 11.50). ಪರೀಕ್ಷಾ ಶುಲ್ಕವನ್ನು ಡೆಬಿಟ್/ ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಯುಪಿಐ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು



