gora 4_page-0001

 

 

ಹೊಸ ವರ್ಷದ ಪಾರ್ಟಿ ಮಾಡಲು ಹೋದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಅರೇಹಳ್ಳಿ ಹೋಬಳಿ ಕಾನಹಳ್ಳಿ ಗ್ರಾಮದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಾನಹಳ್ಳಿ ಗ್ರಾಮದ ಶಿವಯ್ಯ ಎಂಬುವವರ ಪುತ್ರ ಅಜಿತ್ (30) ಹಾಗೂ ಅಣ್ಣಿಪೂಜಾರಿ ಎಂಬುವವರ ಪುತ್ರ ಆಶೋಕ್(35) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಯುವಕರು. ಇಬ್ಬರು ಸಹ ಕೃಷಿಕ ಕುಟುಂಬದವರು.

ಅಜಿತ್
ಅಶೋಕ್

ಮಂಗಳವಾರ ರಾತ್ರಿ ಹೊಸ ವರ್ಷದ ಪಾರ್ಟಿ ಮಾಡಲು ಎಂದು ಇಬ್ಬರು ಗ್ರಾಮದ ಶೇಷಾದ್ರಿ ಎಂಬುವವರ ತೋಟದ ಕೆರೆಯ ಬಳಿಗೆ ತೆರಳಿದ್ದರು ಎನ್ನಲಾಗಿದೆ. ಕರೆಯ ಪಕ್ಕದಲ್ಲಿ ತೋಟಕ್ಕೆ ಬೇಲಿ ಮಾಡಲೆಂದು ಕಲ್ಲುಕಂಬಗಳನ್ನು ಒಟ್ಟಿ ಇಟ್ಟದ್ದರು, ಈ ಕಲ್ಲುಕಂಬಗಳ ಮೇಲೆ ಕುಳಿತು ಇಬ್ಬರು ಪಾರ್ಟಿ ಮಾಡುತ್ತಿದ್ದ ವೇಳೆ ಆಯಾ ತಪ್ಪಿ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಒಬ್ಬರನ್ನು ರಕ್ಷಿಸಲು ಮತ್ತೊಬ್ಬರು ಹೋಗಿ ಇಬ್ಬರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಬ್ಬರೇ ಇದ್ದುದ್ದರಿಂದ ಬೆಳಗ್ಗಿನ ವರೆಗೂ ಘಟನೆಯ ಮಾಹಿತಿ ಯಾರಿಗೂ ಲಭ್ಯವಾಗಿಲ್ಲ.

ರಾತ್ರಿ ಮನೆಗೆ ಬಾರದೇ ಇದ್ದುದ್ದರಿಂದ ಬೆಳಗ್ಗೆ ಕುಟುಂಬದವರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಕೆರೆಯ ಬಳಿ  ಪಾರ್ಟಿ ಮಾಡಿದ ವಸ್ತುಗಳು ಹಾಗೂ ಕೆರೆಯಲ್ಲಿ ಚಪ್ಪಲಿಗಳು ತೇಲುತ್ತಿದ್ದುದು ಕಂಡು ಬಂದಿದ್ದು, ನಂತರ ಕೆರೆಯಲ್ಲಿ ಹುಡುಕಾಟ ನಡೆಸಿ ಇಂದು ಸಂಜೆ ವೇಳೆ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಗಿದೆ.

ಗೋಣಿಬೀಡು ಶೌರ್ಯವಿಪತ್ತು ತಂಡದ ಸದಸ್ಯರು ಮತ್ತು ಬೇಲೂರು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಸಂಜೆ ವೇಳೆಗೆ ಹೊರತೆಗೆದಿದ್ದಾರೆ. ಮೃತದೇಹಗಳನ್ನು ಕಂಡು ಕುಟುಂಬದವರು ರೋಧನ ಮುಗಿಲು ಮುಟ್ಟಿದೆ. ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೇಲೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಇಬ್ಬರು ಅವಿವಾಹಿತರಾಗಿದ್ದು, ಮೃತರಲ್ಲಿ ಅಶೋಕ್ ಅವರಿಗೆ ಮದುವೆ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ. ಒಟ್ಟಾರೆ ಹೊಸವರ್ಷದ ಆಚರಣೆ ಮಾಡಲು ಹೋಗಿ ಎರಡು ಅಮೂಲ್ಯ ಜೀವಗಳು ತಮ್ಮ ಪ್ರಾಣ ಕಳೆದುಕೊಳ್ಳುವಂತಾಗಿದೆ.

ವರದಿ : ರಂಜಿತ್ ಜಿ.ಹೊಸಳ್ಳಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ