ದಿನಾಂಕ 26-01-2025 ರಂದು ಮೂಡಿಗೆರೆ ಲಯನ್ಸ್ ಸಂಸ್ಥೆ ವತಿಯಿಂದ ಬೆಟ್ಟಗೆರೆ/ಹಳಿಕೆ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮೂಡಿಗೆರೆ ಲಯನ್ಸ್ ಸಂಸ್ಥೆ ಸದಸ್ಯರಾದ ಹಳಿಕೆ ಲಯನ್ ಹೆಚ್.ಎಸ್. ಸರ್ವೇಶ್ ಮತ್ತು ಶ್ರೀಮತಿ ರೂಪ, ದಂಪತಿಗಳು ಶಾಲೆಗೆ ಕೊಡುಗೆಯಾಗಿ ಡ್ರಮ್ ಸೆಟ್ಟನ್ನು ನೀಡಿರುತ್ತಾರೆ.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ಎಂ.ಈ.ಜಯಕುಮಾರ್, ಕಾರ್ಯದರ್ಶಿ ಬಿ.ಎಲ್.ದಿನೇಶ್, ಖಜಾಂಚಿ ಹೆಚ್. ಕೆ.ಶಿವಕುಮಾರ್, ಪ್ರಾಂತೀಯ ಅಧ್ಯಕ್ಷರಾದ ಎಂ.ಬಿ. ಗೋಪಾಲಗೌಡ ಮತ್ತು ಸದಸ್ಯರುಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಬಿ.ಕೆ. ದಿನೇಶ್ , ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರಾದ ಹೊನ್ನೇಶ್ , ರಾಜೇಶ್, ಉಪಾಧ್ಯಾಯರ ವೃಂದ, ಗ್ರಾಮಸ್ಥರು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.



