ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮಲ್ಲಾಪುರ ಗ್ರಾಮದ ಸಂಜು(24) ಮೃತ ದುರ್ದೈವಿ ಚಾಲಕ.
ಬೇಲೂರು ತಾಲ್ಲೂಕಿನ ಹಕ್ಕಿಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸ್ಟೋನ್ ಕ್ರಷರ್‌ನಿಂದ ಜೆಲ್ಲಿ ತುಂಬಿಕೊಂಡು ಬರುವಾಗ ಟ್ರಾಕ್ಟರ್ ಆಯಾತಪ್ಪಿ ಮಗುಚಿ ಬಿದ್ದಿದ್ದು, ಟ್ರಾಕ್ಟರ್ ಚಾಲಕ ಸಂಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ರಷರ್ ಮಾಲೀಕರು ರಸ್ತೆ ಸರಿಪಡಿಸದೇ ಇರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ದುರ್ಘಮ ರಸ್ತೆಯೇ ಘಟನೆಗೆ ಕಾರಣ ಎಂದು ದೂರಿದ್ದಾರೆ. ರಸ್ತೆ ಸರಿ ಮಾಡಿಸದೇ ಇದ್ದುದ್ದರಿಂದ ಜೆಲ್ಲಿ ತುಂಬಿಕೊಂಡು ವಾಹನಗಳು ಪ್ರಯಾಸದಿಂದ ಸಂಚರಿಸುತ್ತಿದ್ದವು. ಈ ಘಟನೆಗೆ ಕ್ರಷರ್ ಮಾಲೀಕರೇ ಕಾರಣ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಮೃತ ಚಾಲಕನ ಕುಟುಂಬಕ್ಕೆ ಕ್ರಷರ್ ಮಾಲೀಕನೇ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.



