ಮೀಸಲು ಅರಣ್ಯ ಒತ್ತುವರಿ ಮಾಡಿ ಬೆಳೆದಿದ್ದ 32 ಎಕರೆ ಕಾಫಿ ತೋಟವನ್ನು ತೆರವು ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಬಾಳೆಹೊನ್ನೂರು ಸಮೀಪದ ತನೂಡಿ ಗ್ರಾಮದ ಹೊನ್ನಳ್ಳ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅರಣ್ಯ ಒತ್ತುವರಿ ಮಾಡಿ ಬೆಳೆದಿದ್ದ ಕಾಫಿ ತೋಟವನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೊನ್ನಳ್ಳಿಯಲ್ಲಿ 32 ಎಕರೆ ಒತ್ತುವರಿ ಮಾಡಿ ಕಾಫಿ ಬೆಳೆ ಬೆಳೆಯಲಾಗಿತ್ತು. ಆದರೆ, ಹೈ ಕೊರ್ಟ್ ಆದೇಶ ಮೇರೆಗೆ ಅರಣ್ಯ ಇಲಾಖೆ ವತಿಯಿಂದ 32 ಎಕರೆ ಒತ್ತುವರಿ ಮಾಡಿದ್ದ ಕಾಫಿ ತೋಟವನ್ನು ತೆರವು ಮಾಡಲಾಗಿದೆ.
ಹಲಸೂರು ಮೀಸಲು ಅರಣ್ಯ ವ್ಯಾಪ್ತಿಯ ತನೂಡಿ ಗ್ರಾಮದಲ್ಲಿ ದೇವರಾಜು ಎಂಬ ವ್ಯಕ್ತಿ ಸುಮಾರು 32 ಎಕರೆ ಒತ್ತುವರಿ ಮಾಡಿ ಕಾಫಿತೋಟ ಬೆಳೆದಿದ್ದರು. ಈ ಜಾಗದಲ್ಲಿ ಇವರು ಕಾಫಿ, ಅಡಿಕೆ, ಕಾಳುಮೆಣಸು ಮುಂತಾದ ಬೆಳೆಗಳನ್ನು ಬೆಳೆದಿದ್ದರು.
ಮಂಗಳವಾರ ಎಸಿಎಫ್ ಮೋಹನ್ ಕುಮಾರ್ ಹಾಗೂ ಪ್ರಭಾರ ಆರ್ ಎಫ್ ಓ ಮಧುಕರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಳು ಸ್ಥಳಕ್ಕಾಗಮಿಸಿ ಕಾರ್ಮಿಕರು ಮತ್ತು ಜೇಸಿಬಿ ಬಳಸಿ ಕಾಫಿತೋಟವನ್ನು ತೆರವುಗೊಳಿಸಿದ್ದಾರೆ.


