11-mudigere-1

 

 

ಮೂಡಿಗೆರೆ ತಾಲೂಕು ಕಚೇರಿಯೊಳಗಿರುವ ಸಹಾಯಕ ಭೂಮಾಪನ ನಿರ್ದೇಶಕರ ಇಲಾಖೆಯಲ್ಲಿ ರೈತರ ಯಾವುದೇ ಕೆಲಸಗಳನ್ನು ನಿಗದಿತ ಸಮಯಕ್ಕೆ ಮಾಡಿಕೊಡುತ್ತಿಲ್ಲವೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥಗೌಡರು ಮಾರ್ಚ್ 14 ರಂದು ಭೂಮಾಪನ ಇಲಾಖೆಗೆ ಕಪ್ಪು ಪಟ್ಟಿ ಧರಿಸಿ ಕಚೇರಿಗೆ ಪ್ರವೇಶಿಸುವ ಎಚ್ಚರಿಕೆಯನ್ನು ನೀಡಿದ್ದರು.

ಈ ಹಿನ್ನಲೆಯಲ್ಲಿ ಮಂಗಳವಾರದಂದು ಎಡಿಎಲ್‍ಆರ್ ಮಂಜುನಾಥ್ ಭೂಮಾಪನ ಇಲಾಖೆಗೆ ಆಗಮಿಸಿ ರೈತ ಮುಖಂಡರನ್ನು ಕರೆಸಿ ಜನಸ್ನೇಹಿಯಾಗಿ ನಡೆಸುವ ಭರವಸೆ ನೀಡಿದ್ದರ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಲಿಕವಾಗಿ ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಪತ್ರಕರ್ತರಿಗೆ ಮಾಹಿತಿ ನೀಡಿದ ಮಂಜುನಾಥಗೌಡ ಅವರು, ಜಮೀನಿಗೆ ಸಂಬಂಧಪಟ್ಟ ಪೋಡಿ ಪ್ರಕರಣವನ್ನು ತುರ್ತಾಗಿ ನಿಗದಿತ ಸಮಯಕ್ಕೆ ಮಾಡಿಕೊಡಬೇಕೆಂದು ಸರಕಾರದ ಆದೇಶವಿದ್ದರೂ ಇಲ್ಲಿನ ಭೂಮಾಪನ ನಿರ್ದೇಶಕರ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಸಬೂಬು ಹೇಳಿ ರೈತರನ್ನು ಸತಾಯಿಸುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ದೋಷಪೂರ್ಣ ವರದಿ ಸಲ್ಲಿಸಿ ಅಲೆದಾಡಿಸುತ್ತಿದ್ದಾರೆ. ಅಲ್ಲದೇ ತತ್ಕಲ್ ಪೋಡಿ ಪ್ರಕರಣದಲ್ಲಿ ಹಣ ಕಟ್ಟಿಸಿಕೊಂಡು ಒಂದೂವರೆ ವರ್ಷ ಕಳೆದರೂ ಪಹಣಿ, ಮಿಟೇಷನ್‍ಗಳಲ್ಲಿ ಇಂಡಿಕರಣವಾಗಿದೆ ಎಂದು ಅಭಿಲೇಖಾಲಯದ ಗುಮಾಸ್ತರು ಲಂಚಕ್ಕಾಗಿ ಕಡಿತವನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆಂದು ದೂರಿದ್ದರು.

ಈ ವಿಚಾರವಾಗಿ ಕಚೇರಿಗೆ ಭೇಟಿ ನೀಡಿದ ಎಡಿಎಲ್‍ಆರ್ ಗಮನಕ್ಕೆ ತಂದಾಗ ಅವರು, ಭುಮಾಪನ ಇಲಾಖೇಯಲ್ಲಿ ಭೂಮಾಪಕರ ಕೊರತೆ ಇದ್ದು ಇದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು ಯಾವುದೇ ಸಮಸ್ಯೆಗಳಿದ್ದಲ್ಲಿ ತಮ್ಮನ್ನು   ಸಂಪರ್ಕಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಮಹಿಳಾ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣಗೌಡ, ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮೇಗೌಡ, ಕಾರ್ಯದರ್ಶಿ ನಾಗೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ