November 1, 2026
;
15Mudigere1A

 

 

ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೂಡಿಗೆರೆ ತಾಲೂಕಿನ ಹಳೇಮೂಡಿಗೆರೆ ಗ್ರಾ.ಪಂ. ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ ಅಧಿಕಾರಿಗಳಿಂದ ಸಮಸ್ಯೆ ಬಗೆಹರಿಸುವ ಬಗ್ಗೆ ಲಿಖಿತ ಪತ್ರ ಪಡೆಯುವ ಮೂಲಕ ಹಿಂಪಡೆಯಲಾಯಿತು.

ಕಳೆದ 8 ವರ್ಷದ ಹಿಂದೆ ನಿವೇಶನಕ್ಕಾಗಿ ಕಾಯ್ದಿರಿಸಿದ್ದ ಜಾಗದಲ್ಲಿ ನಿವೇಶನ ರಹಿತರ ಪಟ್ಟಿ ತಯಾರಿಸಲು ಕೂಡಲೇ ಗ್ರಾಮಸಭೆ ಕರೆಯಬೇಕು. ತಿರುಗಾಡಲು ರಸ್ತೆ ನಿರ್ಮಿಸಬೇಕೆಂದು ಕಳೆದ 3 ದಿನದಿಂದ ನಡೆಸಿದ ಅನಿರ್ದಿಷ್ಟಾವಧಿ ಧರಣಿಗೆ ಕೊನೆಗೂ ಅಧಿಕಾರಿಗಳ ಸ್ಪಂಧನೆ ಸಿಕ್ಕಿದ್ದು, ಶನಿವಾರ ತಾ.ಪಂ. ಇಒ ದಯಾವತಿ ಬೇಟಿ ನೀಡಿ, ಮಾ.18ರಂದು ಗ್ರಾ.ಪಂ. ಸದಸ್ಯರ ತುರ್ತು ಸಭೆ ನಡೆಸಿ, 10 ದಿನದಲ್ಲಿ ಗ್ರಾಮಸಭೆ ನಡೆಸುವ ಮೂಲಕ ನಿವೇಶನ ರಹಿತರ ಪಟ್ಟಿ ತಯಾರಿಸಲಾಗುವುದು. ಹಾಗಾಗಿ ಧರಣಿ ಹಿಂಪಡೆಯಬೇಕೆಂದು ಮನವಿ ಮಾಡಿದರು. ಇದಕ್ಕೆ ಧರಣಿ ನಿರತರು ಈ ಬಗ್ಗೆ ಲಿಖಿತ ಪತ್ರದಲ್ಲಿ ನೀಡಬೇಕೆಂದು ಪಟ್ಟು ಹಿಡಿದರು.

ನಂತರ ತಾಲೂಕು ಕಚೇರಿಯಿಂದ ಆರ್‍ಐ ಚಂದ್ರು ಸ್ಥಳಕ್ಕೆ ಆಗಮಿಸಿ ಧರಣಿ ನಿರತರೊಂದಿಗೆ ಮಾತನಾಡಿ, ತುರ್ತಾಗಿ ನಿವೇಶನ ಜಾಗ ಗುರುತು ಮಾಡಲು ತಹಸೀಲ್ದಾರ್ ರಾಜಶೇಖರ್ ಮೂರ್ತಿ ಅವರು ಈಗಾಗಲೇ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಸೋಮವಾರ ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಲಿದ್ದಾರೆ. ಕರಾಬ್ ಜಾಗದಲ್ಲಿ ರಸ್ತೆ ನಿರ್ಮಿಸಲು ಅವಕಾಶ ಸಿಗದಿದ್ದರೆ ಭೂಸ್ವಾದೀನದ ಮೂಲಕ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಹಳೆಮೂಡಿಗೆರೆ ಗ್ರಾ.ಪಂ. ಅಧ್ಯಕ್ಷೆ ರಂಜಿತಾ ಹಾಗೂ ಪಿಡಿಒ ಪ್ರಶಾಂತ್ ಅವರು, ಮಾ.18ರಂದು ತುರ್ತು ಸಭೆ ನಡೆಸಿ, ಗ್ರಾಮಸಭೆ ಮೂಲಕ ಪಟ್ಟಿ ತಯಾರಿಸುವ ಬಗ್ಗೆ ಲಿಖಿತ ಪತ್ರವನ್ನು ಧರಣಿ ನಿರತರಿಗೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆ ಗೌರವಾಧ್ಯಕ್ಷ ಬಿ.ರುದ್ರಯ್ಯ ಮಾತನಾಡಿ, 3 ದಿನದ ಹೋರಾಟಕ್ಕೆ ಅಧಿಕಾರಿಗಳಿಂದ ಲಿಖಿತ ಪತ್ರದ ಮೂಲಕ ಭರವಸೆ ನೀಡಿದ್ದಾರೆ. ತುರ್ತು ಸಭೆ ನಡೆಸಿದ ಬಳಿಕ 10 ದಿನದಲ್ಲಿ ಗ್ರಾಮಸಭೆ ನಡೆಸಿ ಪಟ್ಟಿ ತಯಾರಿಸಬೇಕು. ಯಾವುದೇ ಗೊಂದಲಗಳು ನಡೆಸಿ ಮತ್ತೆ ದಿನಾಂಕ ಮುಂದೂಡಿದರೆ ನಂತರ ನಡೆಯುವ ಧರಣಿ ತೀವ್ರ ಸ್ವರೂಪ ಪಡೆಯಲಿದೆ ಎಂದು ಹೇಳಿದ ಬಳಿಕ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಯಿತು.

ಹಳೆಮೂಡಿಗೆರೆ ಗ್ರಾ.ಪಂ. ಉಪಾಧ್ಯಕ್ಷ ಅಜಿತ್, ಸದಸ್ಯೆ ಜಾನಕಿ, ವೇದಿಕೆ ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಪ್ಪ, ರಾಮು ಛತ್ರಮೈಧಾನ, ಹರೀಶ್ ನಲಿಕೆ, ದಯಾನಂದ, ಹಸೇನಾರ್, ರಘು, ಸುನೀಲ್, ಆಯಿಷಾಬಾನು, ಶಾರದಾ, ವನಜಾ, ಕಮಲಮ್ಮ, ಶೇಖರ್, ಮಂಜುಳಾ, ಯಶೋಧ, ಪ್ರಮಿಳಾ, ನಾಗಮ್ಮ, ರಾಧಾ, ರತ್ನಮ್ಮ ಗೀತಾ ಮತ್ತಿತರರಿದ್ದರು

 

 

Leave a Reply

Your email address will not be published. Required fields are marked *