09ktg1

 

 

ಮೂಡಿಗೆರೆಯ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಮತ್ತು ಕಾಫಿ ನಾಡು ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಸಮಾಜಸೇವಕ ಬಿಳಗುಳದ ಹಸೈನಾರ್ ಅವರ ನಿವಾಸದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆಯ ರಾಜ್ಯಾಧ್ಯಕ್ಷ ಎಂಎಸ್ ನಾಗರಾಜ್, ಮನೆಯಂಗಳದ ಸಾಹಿತ್ಯ ಸಂಜೆಯಂತಹ ಕಾರ್ಯಕ್ರಮಗಳಿಂದ ಸಾಹಿತ್ಯವನ್ನು ಮನೆ ಮತ್ತು ಮನಗಳಿಗೂ ತಲುಪಿಸಲು ಸಾಧ್ಯ. ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಸಾಹಿತ್ಯದ ಜ್ಞಾನವನ್ನು ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನ ಮನಗಳಲ್ಲಿ ಬಿತ್ತುವ ಕಾರ್ಯವನ್ನು ಮಾಡುತ್ತಾ ಸಾಗಿದೆ. ಜಿಲ್ಲೆಯಲ್ಲಿಯೇ ಹೊಚ್ಚಹೊಸ ವಿನೂತನ ಪ್ರಯತ್ನವೆಂಬಕತೆ ಕಥಾ ನಿರೂಪಣೆಯಿಂದ ಕಥೆಯನ್ನು ಕೇಳಿದ ನಂತರ ಪುಸ್ತಕವನ್ನು ಹುಡುಕುವ ಮನಸ್ಥಿತಿ ಎಲ್ಲಾ ಕನ್ನಡಿಗರಲ್ಲಿ ಬರಲಿ ಎಂದರು. ಮುಂದಿನ ದಿನಗಳಲ್ಲಿಯೂ ಕರ್ನಾಟಕದ ಅಗ್ರಮಾನ್ಯ ಕವಿಗಳ ಪುಸ್ತಕಗಳ ಕಥಾ ನಿರೂಪಣೆಯನ್ನು ನಿರಂತರ ಮಾಡುವ ಮೂಲಕ ಆ ಕವಿಗಳ ಪುಸ್ತಕದ ಪರಿಚಯವನ್ನು ಎಲ್ಲರಿಗೂ ಮಾಡುವ ಮಾಡಿಸುವ ಪ್ರಯತ್ನವನ್ನು ವೇದಿಕೆ ಮಾಡಲಿದೆ ಎಂದರು.

ಉದ್ಘಾಟನೆಯನ್ನು ಕೆ ಮಂಚೇಗೌಡರು ನೆರವೇರಿಸಿದರು.

ಕನ್ನಡ ಭಾಷೆಯ ಸ್ಥಿತಿ ಗತಿ ಮತ್ತು ಸವಾಲು ಈ ವಿಷಯದ ಬಗ್ಗೆ ಪತ್ರಕರ್ತರದಂತಹ ಎಚ್ ಎಂ ಅಮರ್ನಾಥ್ ಉಪನ್ಯಾಸವನ್ನು ನೀಡಿದರು. ತೇಜಸ್ವಿಯವರ ಕರ್ವಾಲೊ ಕೃತಿಯ ಬಗ್ಗೆ ಸಾಹಿತಿ ಮತ್ತು ಪತ್ರಕರ್ತ ನಂದೀಶ್ ಬಂಕೇನಹಳ್ಳಿ ರವರು ಕಥಾ ನಿರೂಪಣೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮೂಡಿಗೆರೆಯ ವಿವಿಧ ಗಾಯಕ ಗಾಯಕಿಯರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಜಿಎಸ್ ಶಿವರುದ್ರಪ್ಪನವರ ಕವಿತೆಗಳ ವಾಚನ ನಡೆಯಿತು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮೂವರು ಸಾಧಕರನ್ನು ಗೌರವಿಸಲಾಯಿತು.

ಮಂತ್ರ ಮಾಂಗಲ್ಯ ದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮಾದರಿಯಾದ ನಂದೀಶ್ ಬಂಕೇನಹಳ್ಳಿ ಮತ್ತು ದೀಕ್ಷಾ ದಂಪತಿಗಳನ್ನು ಗೌರವಿಸಲಾಯಿತು.

ಸಮಾಜ ಸೇವಕ ಹಾಗೂ ಕಾಫಿ ನಾಡು ಸೇವಾ ಸಂಘದ ಅಧ್ಯಕ್ಷ ಹಸೇನರ್ ಬಿಳಗುಳ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ. ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್ ಬಾಲಕೃಷ್ಣ. ಹೆಚ್. ಎಂ. ಶಾಂತಕುಮಾರ್. ಸಾಹಿತಿ ಡಿ.ಎಂ ಮಂಜುನಾಥ್ ಸ್ವಾಮಿ. ಸಾಹಿತ್ಯ ಸಂಭ್ರಮ ವೇದಿಕೆಯ  ರಾಜ್ಯ ಪ್ರಧಾನ ಕಾರ್ಯದರ್ಶಿ  ನವೀನ್ ಬಿ ಆರ್., ರಮ್ಯಾ ಶ್ರೀ ಹಿರೇಶೀಗರ. ಮಗ್ಗಲಮಕ್ಕಿ ಗಣೇಶ್, ನವೀನ್ ಆನೆ ದಿಬ್ಬ, ರವಿ ಕುನ್ನಹಳ್ಳಿ, ಬಕ್ಕಿ ಮಂಜುನಾಥ್,ವಸಂತ್ ಹಾರ್ಗೋಡು, ದೀಕ್ಷಾನಂದೀಶ್. ದಾಕ್ಷಾಯಿಣಿ .ವಿದ್ಯಾ. ಇಂಪಾ. ಹೆಚ್.ಎಂ.ಜಗದೀಶ್ .ಜ್ಯೋತಿ ಸಾಲ್ಡಾನ ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ