ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ; 10/04/2025 ರಂದು ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರದ ಏಕಲವ್ಯ ವಸತಿ ಶಾಲೆ ಸಮೀಪ ಕಡೂರು-ಮಂಗಳೂರು ರಸ್ತೆ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಮಹಮ್ಮದ್ ಆಸ್ರಫ್ ಬಿನ್ ಲೇಟ್ ಹಸನಬ್ಬ, ಮಹಮ್ಮದ್ ಫಾರೂಕ್ ಬಿನ್ ಲೇಟ್ ಸುಲೈಮಾನ್, ಮಹಮ್ಮದ್ ಅಸ್ಫಾನ್ ಬಿನ್ ಮಹಮ್ಮದ್ ಅಸ್ಲಾಂ ಅಕ್ರಮವಾಗಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ದಾಳಿ ನಡೆಸಿ ಸದರಿ ವ್ಯಕ್ತಿಗಳನ್ನು ವಶಕ್ಕೆ ಪಡೆದು, ಆರೋಪಿತರು ಅಕ್ರಮವಾಗಿ ಹೊಂದಿದ್ದ 2 ಕೆ.ಜಿ. 20 ಗ್ರಾಂ ಗಾಂಜಾವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಪೊಲೀಸ್ ಠಾಣಾ ಉಪಾಧೀಕ್ಷಕರಾದ ತಿಪ್ಪೇಸ್ವಾಮಿ ಜೆ.ಎಸ್. ಪಿಎಸ್ಐ ಅಬ್ದುಲ್ ಖಾದರ್ ಹಾಗೂ ಸಿಬ್ಬಂದಿಗಳಾದ ಅನ್ವರ್, ಹರೀಶ್, ಹರಿಪ್ರಸಾದ್, ಮಹೇಂದ್ರ, ರಮೇಶ್ ಮತ್ತು ಲೋಕೇಗೌಡ ರವರು ಭಾಗವಹಿಸಿದ್ದರು



