October 28, 2026
;
congress

 

 

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಹಾಗೂ ಕೇಂದ್ರ ಸರ್ಕಾರ ವೈಫಲ್ಯದ ವಿರುಧ್ದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮೂಡಿಗೆರೆ ಲಯನ್ ಸರ್ಕಲ್ ನಲ್ಲಿ
ಮೊಂಬತ್ತಿ ನಡಿಗೆ ಮತ್ತು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಮೂಡಿಗೆರೆ ಕಸಬಾ ಹೋಬಳಿಯ ಅಧ್ಯಕ್ಷರಾದ ಸಿ.ಬಿ ಶಂಕರ್, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಕುನ್ನಳಿ ರವಿ, ಕಸಬಾ ಹೋಬಳಿ ಅಲ್ಪಸಂಖ್ಯಾತರ ಅಧ್ಯಕ್ಷರಾದ ಯಾಕೊಬ್, ಪರಿಶಿಷ್ಟ ಪಂಗಡದ ಬ್ಲಾಕ್ ಅಧ್ಯಕ್ಷರಾದ ಹರೀಶ್ ಸಬೇನಹಳ್ಳಿ. ಹಿಂದುಳಿದ ವರ್ಗದ ಬ್ಲಾಕ್ ಅಧ್ಯಕ್ಷರ ಷಣ್ಮುಖ, ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿಯಾದ ಬಾವು,  ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಇಮ್ರಾನ್, ಗ್ಯಾರಂಟಿ ಸಮಿತಿ ಸದಸ್ಯರಾದ ಶ್ರೀನಿವಾಸ್ , ಯುವ ಕಾಂಗ್ರೆಸ್ ಮುಖಂಡರಾದ ಅನಿಲ್ ಛತ್ರಮೈದಾನ, ಆಶಿಕ್ ಬಿಜುವಳ್ಳಿ ಮುಂತಾದವರು ಭಾಗವಹಿಸಿದ್ದರು

 

 

Leave a Reply

Your email address will not be published. Required fields are marked *