ಪಹಲ್ಗಾಮ್ ದಾಳಿಯ ನಂತರ ಭಾರತದ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಕಟಿಸುತ್ತಿದ್ದ ಪಾಕಿಸ್ತಾನ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಭಾರತ ಡಿಜಿಟಲ್ ಸ್ಟ್ರೈಕ್ ಮಾಡಿದೆ.
ಕೇಂದ್ರ ಗೃಹ ಸಚಿವಾಲದ ಶಿಫಾರಸುಗಳ ಆಧಾರದಲ್ಲಿ 16 ಯೂಟ್ಯೂಬ್ ಚಾನೆಲ್‌ಗಳನ್ನು ಯೂಟ್ಯೂಬ್ ಭಾರತದಲ್ಲಿ ಬ್ಲಾಕ್ ಮಾಡಿದೆ. ಬ್ಲಾಕ್ ಆದ ಚಾನೆಲ್‌ಗಳ ಪಟ್ಟಿಯಲ್ಲಿ ಡಾನ್ ನ್ಯೂಸ್, ಸಾಮ್ನಾ ಟಿವಿ, ಜಿಯೊ ನ್ಯೂಸ್, ಪಾಕ್ ಮಾಜಿ ಆಟಗಾರ ಶೋಯೆಬ್ ಅಕ್ತರ್ ಅವರ ಚಾನೆಲ್ ಇದೆ.

ಉಗ್ರರ ದಾಳಿಯ ನಂತರ ಭಾರತ, ಭಾರತೀಯ ಸೇನೆ, ಭದ್ರತಾ ಪಡೆಗಳ ವಿರುದ್ಧ ಪ್ರಚೋದನಕಾರಿ ವಿಷಯವನ್ನು ಪ್ರಸಾರ ಮಾಡುತ್ತಿದ್ದವು.
ಈಗ ಈ ಚಾನೆಲ್ ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ “This content is currently unavailable in this country because of an order from the government related to national security or public order.” ಎಂಬ ಸಂದೇಶ ಕಾಣಿಸುತ್ತಿದೆ.