1003391306

 

 

ದೇಶದ ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶ ಬಹುತೇಕ ಪ್ರಕಟವಾಗಿದೆ. ಅಸ್ಸಾಂ ಮತ್ತು ಪುದಿಚೇರಿ ಹೊರತುಪಡಿಸಿ ಉಳಿದ ಮೂರು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದ ಪಕ್ಷಗಳು ದೂಳೀಪಟವಾಗಿವೆ.

ಬಹು ಕುತೂಲಹ ಕೆರಳಿಸಿದ್ದ ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಮುನ್ನಡೆಯೊಂದಿಗೆ ಬಿಜೆಪಿ ತನ್ನ ಆದಿಪತ್ಯ ಸ್ಥಾಪಿಸಿದೆ. 294 ಸ್ಥಾನಗಳ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಬಿಜೆಪಿ 204 ಸ್ಥಾನಗಳನ್ನು ಗೆದ್ದು ಬೀಗಿದೆ. ಬಂಗಾಳದಲ್ಲಿ ಆಡಳಿತ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಕೇವಲ 83 ಸ್ಥಾನಗಳನ್ನು ಗಳಿಸಿದೆ. ಈ ಮೂಲಕ ಬಂಗಾಳದಲ್ಲಿ ಕಮಲ ಅರಳಿದ್ದು, ಹೊಸ ರಾಜಕೀಯ ಶಕೆಗೆ ಮುನ್ನುಡಿ ಬರೆದಿದೆ.

ಬಂಗಾಳದೊಂದಿಗೆ ಅಸ್ಸಾಂ ಮತ್ತು ಪುದಿಚೆರಿ ರಾಜ್ಯಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮರುಸ್ಥಾಪಿಸಿದೆ.  ಅಸ್ಸಾಂ ನ 126 ವಿಧಾನಸಭಾ ಕ್ಷೇತ್ರಗಳಲ್ಲಿ 102  ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೇಸ್ ಕೇವಲ 21 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಪುದಿಚೇರಿಯಲ್ಲಿ 30 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗಳಿಸಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ.

ಇತ್ತ ನೆರೆಯ ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿಗೆ ಈ ಚುನಾವಣೆ ಸಾಕ್ಷಿಯಾಗಿದೆ. ಇಲ್ಲಿ ಸಿನಿಮಾ ನಟ ವಿಜಯ್ ದಳಪತಿ ನೇತೃತ್ವದ ನೂತನ ಪಕ್ಷ ಟಿವಿಕೆ ಅಧಿಕಾರದ ಗದ್ದುಗೆಗೆ ಸನಿಹಕ್ಕೆ ಬಂದಿದೆ. ಇಲ್ಲಿ ಸಾಂಪ್ರದಾಯಿಕ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ವಿಜಯ್ ಅಲೆಯಲ್ಲಿ ಕೊಚ್ಚಿಹೋಗಿವೆ. ಒಟ್ಟು 234 ಸ್ಥಾನಗಳ ತಮಿಳುನಾಡು ವಿಧಾನಸಭೇಯಲ್ಲಿ ವಿಜಯ್ ನೇತೃತ್ವದ ಟಿಎಂಕೆ 108 ಸ್ಥಾನಗಳನ್ನು ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಸರಳ ಬಹುಮತಕ್ಕೆ 118 ಸ್ಥಾನಗಳ ಅವಶ್ಯಕತೆಯಿದ್ದು, ಕಾಂಗ್ರೇಸ್ ಮತ್ತಿತರ ಪಕ್ಷಗಳ ನೆರವಿನಿಂದ ತಮಿಳುನಾಡಿನಲ್ಲಿ ಟಿವಿಕೆ ಅಧಿಕಾರ ಹಿಡಿಯುವ ಸಾಧ್ಯತೆಯಿದೆ.

ಇತ್ತ ಕೇರಳಂ ರಾಜ್ಯದಲ್ಲಿ ಎಂದಿನಂತೆ ಆಡಳಿತ ಪಕ್ಷದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿದ್ದು ಕಮ್ಯುನಿಸ್ಟ್ ನೇತೃತ್ವದ ಎಲ್.ಡಿ.ಎಫ್ ಮೈತ್ರಿಕೂಟ ಸೋಲನುಭವಿಸಿದ್ದು, ಕಾಂಗ್ರೇಸ್ ನೇತೃತ್ವದ ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದೆ. ಕೇರಳಂನ  140 ಕ್ಷೇತ್ರಗಳಲ್ಲಿ ಯುಡಿಎಫ್ 102 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆರಿದೆ.

ಇತ್ತ ಕರ್ನಾಟಕದ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾಜಿ ಸಚಿವ ಹೆಚ್.ವೈ. ಮೇಟಿಯವರ ಪುತ್ರ ಉಮೇಶ್ ಮೇಟಿ ದಾವಣಗೆರೆ ಕ್ಷೇತ್ರದಲ್ಲಿ ಸಮರ್ಥ್ ಶ್ಯಾಮನೂರು ವಿಜಯಶಾಲಿಯಾಗಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ