suddi-7 (5)

 

 

ಭಾರತದಲ್ಲೇ ಚಿಕ್ಕಮಗಳೂರು ಜಿಲ್ಲೆ ಅತ್ಯಂತ ಸುಂದರ ತಾಣಗಳಲ್ಲಿ ಒಂದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಸಂದರ್ಶಕರು ವಿಶೇಷವಾದದ್ದನ್ನು ಕಂಡುಕೊಳ್ಳುತ್ತಾರೆ. ಸಾಹಸಮಯ, ಪ್ರಕೃತಿ, ಆಧ್ಯಾತ್ಮಿಕತೆ, ವನ್ಯಜೀವಿ, ಸಂಸ್ಕೃತಿ ಅಥವಾ ಸರಳವಾಗಿ ಪಶ್ಚಿಮ ಘಟ್ಟ ದೈವಗಳ ವಿಶೇಷವು ಮೈ ರೋಮಾಂಚನಗೊಳಿಸು ತ್ತದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಹೊರವಲಯದಲ್ಲಿ ಮಂಗಳವಾರ ಸಂಜೆ  ಕರ್ನಾಟಕ ಟೂರಿಸಂ ಸೊಸೈಟಿ, ಚಿಕ್ಕಮಗಳೂರು ರೆಸಾರ್ಟ್ ಮಾಲೀಕರ ಅಸೋಸಿಯೇಷನ್, ಪ್ರವಾಸೋದ್ಯಮ ಅಭಿವೃದ್ದಿ ನಿಗಮ, ಮೈಸೂರು ಸೇ ಲ್ಸ್ ಇಂಟನ್ಯಾಷನಲ್ ಲಿಮಿಟೆಡ್, ಮೈಸೂರು ಸ್ಯಾಂಡಲ್ ಸೋಪ್, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಮತ್ತು ಸ್ಥಳೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ಧ ಡಿಸ್ಕವರ್ ಚಿಕ್ಕಮಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಚ್ಚಹಸಿರಿನಿಂದ ಕೂಡಿರುವ ಅರಣ್ಯ ಸಂಪತ್ತು ಜಿಲ್ಲೆಯ ಶ್ರೀಮಂತ ಹಾಗೂ ಸಾಂಸ್ಕೃತಿಕ ಪರಂಪರೆ ಯನ್ನು ಎತ್ತಿಹಿಡಿದಿದೆ. ಪ್ರಕೃತಿ, ಕೃಷಿ ಮತ್ತು ಪ್ರವಾಸೋದ್ಯಮವು ಸುಂದರವಾಗಿ ಒಟ್ಟಿಗೆ ಬರುವ ಸ್ಥಳವಾಗಿದೆ. ಈ ಪ್ರವಾಸಿ ತಾಣದಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರೆಂದು ಭಾವಿಸಬೇಕು ಎಂದು ತಿಳಿಸಿದರು.

ಭಾರತದಲ್ಲೇ ಚಿಕ್ಕಮಗಳೂರು ಜಿಲ್ಲೆ ಅತ್ಯಂತ ಸುಂದರ ತಾಣಗಳಲ್ಲಿ ಒಂದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಸಂದರ್ಶಕರು ವಿಶೇಷವಾದದ್ದನ್ನು ಕಂಡುಕೊಳ್ಳುತ್ತಾರೆ. ಸಾಹಸಮಯ, ಪ್ರಕೃತಿ, ಆಧ್ಯಾತ್ಮಿಕತೆ, ವನ್ಯಜೀವಿ, ಸಂಸ್ಕೃತಿ ಅಥವಾ ಸರಳವಾಗಿ ಪಶ್ಚಿಮ ಘಟ್ಟ ದೈವಗಳ ವಿಶೇಷವು ಮೈ ರೋಮಾಂಚನಗೊಳಿಸು ತ್ತದೆ ಎಂದರು.

ಮಲೆನಾಡಿನ ತಾಣ ನೈಸರ್ಗಿಕ ಸೌಂದರ್ಯದಿಂದ ಮಾತ್ರವಲ್ಲದೇ, ಸಂಸ್ಕೃತಿ ಮತ್ತು ಸಾಹಿತ್ಯದಲ್ಲೂ ಶ್ರೀಮಂತವಾಗಿದೆ. ರಾಷ್ಟ್ರ ಕವಿ ಕುವೆಂಪು ನಂಟು ಜಿಲ್ಲೆಗೆ ಅಪಾರವಿದೆ. ಈ ಮಹಾನೀಯರ ಆದರ್ಶ, ದೃಷ್ಟಿ, ತಲೆಮಾರುಗಳಿಂದ ಪ್ರೇರಣೆ ನೀಡುತ್ತದೆ. ಪ್ರಕೃತಿ ಮತ್ತು ಮಾನವೀಯತೆ ಮೇಲಿನ ಪ್ರೀತಿ ಭೂಮಿಯ ನಿಜ ವಾದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.

ರಾಜ್ಯಸರ್ಕಾರ ಜಿಲ್ಲೆಯ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಾಗ ಪ್ರವಾಸೋದ್ಯಮ ಮೂಲ ಸೌಕರ್ಯವನ್ನು ಸುಧಾರಿಸಲು ಬದ್ಧವಾಗಿದೆ. ಅತ್ಯಂತ ಮಹತ್ವದ ಯೋಜನೆಗಲ್ಲಿ ಒಂದು ಮುಳ್ಳಯ್ಯನಗಿರಿ ರೋಪ್‍ವೇ ಯೋಜನೆ ಪ್ರವಾಸೋದ್ಯಮಕ್ಕೆ ಜಿಲ್ಲಾ ಸಚಿವರು ಬೆಂಬಲಿತವಾಗಿದ್ದು ಈ ಕನಸನ್ನು ವಾಸ್ತವವಾ ಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕರ್ನಾಟಕ ಟೂರಿಸಂ ಸೊಸೈಟಿ ಅಧ್ಯಕ್ಷ ಕೆ.ಶ್ಯಾಮರಾಜು ಮಾತನಾಡಿ, ಚಿಕ್ಕಮಗಳೂರಿನ ಆನ್ವೇಷಿಸುವ  ಇಂದಿನ ಸಮಾರಂಭದಲ್ಲಿ ದೇಶದ ಸುಮಾರು 25ಕ್ಕೂ ಹೆಚ್ಚು ರಾಜ್ಯಗಳು ಪ್ರತಿನಿಧಿಸುತ್ತಿದೆ. ರಾಜ್ಯದಲ್ಲೇ ಜಿಲ್ಲೆ ಅದ್ಬುತ ತಾಣವಾದರೂ, ಸರಿಯಾಗಿ ಮಾರುಕಟ್ಟೆ ವ್ಯವಸ್ಥೆ ರೂಪುಗೊಂಡಿಲ್ಲ. ಅದಕ್ಕಾಗಿಯೇ ನಾವೆಲ್ಲರೂ ಸಹಾಯಕ್ಕೆಂದೇ ಟೂರಿಸಂ ಮುಖೇನಾ ಜಿಲ್ಲೆಯನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯವು ಭಾರತದ ಕಾಫಿ, ವಿದ್ಯಾಭ್ಯಾಸ, ಕೌಶಲ್ಯತೆ, ವೈದ್ಯಕೀಯ ಸೇವೆಯ ರಾಜಧಾನಿ ಯಾಗಿದೆ. ಪವಿತ್ರ ದೇವಸ್ಥಾನದ ಪುಣ್ಯ ಕ್ಷೇತ್ರಗಳ ಪ್ರತೀತಿ ಹೊಂದಿದ್ದು, ಇದಕ್ಕಾಗಿಯೇ ಕರ್ನಾಟಕವು ಶ್ರೇಷ್ಟವಾಗಿದೆ ಎಂದು ಹೇಳಿದರು.

ಜಗತ್ತಿನಲ್ಲಿ ಸುಮಾರು 190ಕ್ಕೂ ಹೆಚ್ಚು ರಾಷ್ಟ್ರಗಳು ಪ್ರವಾಸೋಮದ್ಯಮಲ್ಲಿ ಜೀವಿಸುತ್ತಿದೆ. ಭಾರತದಲ್ಲಿ ಸಕಲ ಸೌಲಭ್ಯವು ಲಭ್ಯವಿದ್ದರೂ ದೇಶ ಹಾಗೂ ರಾಜ್ಯವನ್ನು ಮಾರುಕಟ್ಟೆಯಿಂದ ಕಡೆಗಣಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಪ್ರವಾಸೋದ್ಯಮ ಉತ್ತೇಜಿಸುವ ಹಿನ್ನೆಲೆಯಲ್ಲಿ ಟೂರಿಸಂ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಎಂದರು.

ಜಿಲ್ಲಾಧಿಕಾರಿ ಭನ್ವರ್‍ಸಿಂಗ್ ಮೀನಾ ಮಾತನಾಡಿ, ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ತಾವು ಕರ್ತವ್ಯ ನಿರ್ವ ಹಿಸಿದ್ದೇನೆ. ಅಲ್ಲಿನ ಹವಾಗುಣ, ಜೈವಿಕ ವೈವಿಧ್ಯತೆಯನ್ನು ಸಹ ಅನುಭವಿಸಿದ್ದೇನೆ. ಆದರೆ ಚಿಕ್ಕಮಗಳೂರಿನ ಪಶ್ಚಿಮಘಟ್ಟ ಶ್ರೇಣಿಗಳು ಅತ್ಯಂತ ಸುಂದರ ಕ್ಷಣಗಳನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು

ಜಿಲ್ಲೆಯ ಭದ್ರಾ ಸಫಾರಿ, ಕುದುರೆಮುಖ, ಶೋಲಾಕಾಡು, ದತ್ತಪೀಠ, ಹೊಯ್ಸಳರ ದೇವಸ್ಥಾನ ಅತ್ಯಂತ ಜನಪ್ರಿಯವಾಗಿದೆ. ಅಲ್ಲದೇ ಸಾಕಷ್ಟು ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಇತಿಹಾಸದಲ್ಲಿ ಆಸಕ್ತಿ ಪ್ರವಾಸಿಗರು ಒಮ್ಮೆಯಾದರೂ ಜಿಲ್ಲೆಗೆ ಭೇಟಿ ನೀಡಬೇಕು. ಜೊತೆಗೆ ಪ್ರವಾಸಿಗರ ಸುರಕ್ಷಿತೆ ಮತ್ತು ಜವಾಬ್ದಾ ರಿಯುತ ಪ್ರವಾಸೋದ್ಯಮಕ್ಕೆ ಜಿಲ್ಲಾಡಳಿತ ಬದ್ಧ ಎಂದರು.

ವಿಶ್ವವಾಣಿ ಪತ್ರಿಕೆ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಕರ್ನಾಟಕ ರಾಜ್ಯ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದೆ. ಇಲ್ಲಿನ ವೈಶಿಷ್ಟತೆಗಳು, ಶತಮಾನದಷ್ಟು ಹಳೆಯ ಪರಂಪರೆಯಿದೆ. ವಾಸ್ತವವಾಗಿ ಜಾಗತೀಕ ಉತ್ಪನ್ನ, ದೃಷ್ಟಿಕೋನ, ಅರೇಬಿಕಾ ಕಾಫಿಗೆ ಅಧಿಕೃತ ಭೌಗೋಳಿಕ ಹಿನ್ನೆಲೆಯಿದೆ. ಅಲ್ಲದೇ ಜಗತ್ತಿಗೆ ಶೇ.70 ರಷ್ಟು ಕಾಫಿ ಉತ್ಪಾದನೆ ಜಿಲ್ಲೆ ಪ್ರತೀತಿ ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ  ನಿಗಮದ  ಅಧ್ಯಕ್ಷ ಎಂ.ಶ್ರೀನಿವಾಸ್, ಪರಿಸರ ಮೌಲ್ಯಮಾಪನ ಪ್ರಾಧಿಕಾರ ಅಧ್ಯಕ್ಷ ಎ.ಎನ್.ಮಹೇಶ್, ಭದ್ರಾಕಾಡ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಚಿಕ್ಕಮಗಳೂರು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಎಂ.ಪಿ.ಚೇತನ್, ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ,  ಸರ್ಕಾರದ ಪ್ರಧಾನ ಕಾರ್ಯದರ್ಶಿ ಮನೋಜ್‍ಕುಮಾರ್, ಐಎಎಸ್ ಅಧಿಕಾರಿ ಡಾ.ಕೆ.ವಿ.ತ್ರಿಲೋಕ್‍ಚಂದ್ರ, ವಿವಿಧ ಇಲಾಖೆ ಅ ಧಿಕಾರಿಗಳಾದ ಪಿ.ಆರ್.ಶಿವಪ್ರಸಾದ್  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ