ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಜಿಲ್ಲಾ ಘಟಕದ ಚಿಕ್ಕಮಗಳೂರು ಅಧ್ಯಕ್ಷರಾಗಿ ಹೊನ್ನೇಶ್ ಮತ್ತು ಗೌರವ ಅಧ್ಯಕ್ಷರಾಗಿ ರಮೇಶ್ ಅವರನ್ನು ಸರ್ವಾನುಮತದಿಂದ ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಪದಾಧಿಕಾರಿಗಳು : ಹುಣಸೇಮಕ್ಕಿ ಲಕ್ಷ್ಮಣ್ (ಹಿರಿಯ ಸಲಹೆಗಾರ), ಪ್ರವೀಣ್, ರಾಜಣ್ಣ (ಉಪಾಧ್ಯಕ್ಷರು), ಲೋಕೇಶ್ (ಪ್ರಧಾನ ಕಾರ್ಯದರ್ಶಿ), ದಿಲೀಪ್ (ನಗರಾಧ್ಯಕ್ಷ), ಕೀರ್ತಿ (ತಾಲ್ಲೂಕು ಅಧ್ಯಕ್ಷ), ಮುರುಗೇಶ್ (ಪೌರಕಾರ್ಮಿಕ ಅಧ್ಯಕ್ಷ), ದಿವಾಕರ್ ಹಕ್ಕಿಪಿಕ್ಕಿ (ಆದಿಬುಡಕಟ್ಟು ಜನಾಂಗದ ಅಧ್ಯಕ್ಷ) ಸೇರಿದಂತೆ ವಿವಿಧ ತಾಲ್ಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.



