ಶುಕ್ರವಾರ ಪ್ರಕಟವಾದ ರಾಜ್ಯದ ಎಸ್ ಎಸ್ ಎಲ್ ಸಿ (ರಾಜ್ಯ ಪಠ್ಯಕ್ರಮ) ಪರೀಕ್ಷೆಯ ಫಲಿತಾಂಶದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 77.94 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 12419 ವಿದ್ಯಾರ್ಥಿಗಳಲ್ಲಿ 9565 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೃಂಗೇರಿ ತಾಲ್ಲೂಕು ಶೇಕಡಾ 92 ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ. ಚಿಕ್ಕಮಗಳೂರು ಸೆಂಟ್ ಮೇರಿಸ್ ಚಿಕ್ಕಮಗಳೂರು ಶಾಲೆಯ ನವ್ಯಶ್ರೀ ಹೆಚ್. 624 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ತರೀಕೆರೆ ಅರುಣೋದಯ ಶಾಲೆಯ ಸುದೀಕ್ಷಾ ಹಾಗೂ ಕಡೂರು ವೇದಾವತಿ ಬಾಲಕಿಯರ ಶಾಲೆಯ ಶ್ವೇತಾ 623 ಅಂಕಗಳೊಂದಿಗೆ ದ್ವಿತೀಯಾ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ.

ಮೂವರು ವಿದ್ಯಾರ್ಥಿಗಳು ತಲಾ 622 ಅಂಕ, 8 ವಿದ್ಯಾರ್ಥಿಗಳು ತಲಾ 621 ಅಂಕಗಳು ಮತ್ತು 7 ವಿದ್ಯಾರ್ಥಿಗಳು ತಲಾ 620 ಅಂಕಗಳನ್ನು ಗಳಿಸಿದ್ದಾರೆ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಬಂದಿದೆ. ಉಡುಪಿ ಎರಡನೇ ಸ್ಥಾನ ಪಡೆದಿದ್ರೆ, ಉತ್ತರ ಕನ್ನಡ ಜಿಲ್ಲೆಗೆ ಮೂರನೇ ಸ್ಥಾನ ಬಂದಿದೆ. ಮತ್ತು ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.



