ಸಾಂದರ್ಭಿಕ ಚಿತ್ರ
ಕಾಡೆಮ್ಮೆ ದಾಳಿಯಿಂದ ರೈತರೊಬ್ಬರು ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಮೃತ ರೈತನ್ನು ತಾಲೂಕಿನ ಕಲ್ಲಹಳ್ಳಿ ಗ್ರಾಮದ ತಿಮ್ಮಪ್ಪ (60) ಎಂದು ಗುರುತಿಸಲಾಗಿದೆ.
ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ಕಲ್ಲಹಳ್ಳಿಯಲ್ಲಿ ಇಂದು (ಮೇ 5) ಬೆಳಗ್ಗೆ ಎಂದಿನಂತೆ ರೈತ ತಿಮ್ಮಪ್ಪ ತನ್ನ ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡೆಮ್ಮೆ ಏಕಾಏಕಿ ದಾಳಿ ಮಾಡಿದೆ ಎನ್ನಲಾಗಿದೆ. ಕಾಡೆಮ್ಮೆ ಬಲವಾಗಿ ಗುದ್ದಿದ್ದರಿಂದ ರೈತ ತಿಮ್ಮಪ್ಪ ಸ್ಥಳದಲ್ಲೇ ಮೃತಪಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಭಾಗದಲ್ಲಿ ಕಾಡಾನೆ, ಕಾಡುಕೋಣಗಳ ಹಾವಳಿ ಮಿತಿಮೀರಿದ್ದು, ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಪಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.
ಮೂರು ದಿನದ ಹಿಂದೆಯಷ್ಟೇ ತಾಲ್ಲೂಕಿನ ಬೈಕೆರೆ ಎಂಬಲ್ಲಿ ಕಾಡಾನೆ ರೈತರೋರ್ವರನ್ನು ತುಳಿದು ಸಾಯಿಸಿತ್ತು. ಇದೀಗ ಕಾಡುಕೋಣ ದಾಳಿಗೆ ತಾಲ್ಲೂಕಿನ ರೈತರೋರ್ವರು ತಮ್ಮ ಜೀವ ಕಳೆದುಕೊಂಡಿದ್ದಾರೆ.



