ಕೊಪ್ಪ ತಾಲೂಕಿನ ಜಯಪುರದಲ್ಲಿ ಕಂದಾಯ ಇಲಾಖೆಯ ನಾಡಕಛೇರಿ ಕುಸಿದು ಬಿದ್ದಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ವರ್ಷದ ಹಿಂದಷ್ಟೇ 5 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿದ್ದ ನಾಡಕಚೇರಿ ಕಟ್ಟಡ ಕುಸಿದು ಬಿದ್ದಿದೆ.
ಕಚೇರಿಯಲ್ಲಿ ಅಧಿಕಾರಿಗಳು, ಜನಸಾಮಾನ್ಯರು ಇದ್ದಾಗಲೇ ಕಟ್ಟಡ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿದ್ದರಿಂದ ಕಚೇರಿಯಲ್ಲಿದ್ದ ದಾಖಲೆಗಳು ನಾಶವಾಗಿವೆ.
ಹಳೇಯ ಶಾಲಾ ಕಟ್ಟಡವೊಂದನ್ನು ನಾಡಕಚೇರಿಯನ್ನಾಗಿ ಪರಿವರ್ತಿಸಲಾಗಿತ್ತು. ಕಳೆದ 1 ವರ್ಷದ ಹಿಂದಷ್ಟೆ 5 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡವನ್ನು ದುರಸ್ತಿ ಮಾಡಲಾಗಿತ್ತು. ಕಟ್ಟಡ ದುರಸ್ತಿ ಕಾಮಗಾರಿ ಕಳಪೆಯಾಗಿದ್ದು ಕಟ್ಟಡದ ಮೇಲ್ಚಾವಣಿ ಕುಸಿದು ಬೀಳಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದೊಂದು ವಾರದಿಂದ ಸುರಿದ ಮಳೆಯಿಂದ ಕಚೇರಿ ತೇವಗೊಂಡು ಈ ಅನಾಹುತ ಸಂಭವಿಸಿದೆ.



