ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕಲ್ಲತ್ತಿಗಿರಿಯಲ್ಲಿ ಭಾರೀ ಗಾಳಿಯಿಂದ 100 ವರ್ಷಗಳ ಹಳೆಯದಾದ ಬೃಹತ್ ಅರಳಿ ಮರ ಧರೆಗುರುಳಿದ್ದು, ಆಟೋ ಹಾಗೂ ಕಾರು ಜಖಂಗೊಂಡಿವೆ. ಆಟೋ ಚಾಲಕನಿಗೆ ಗಂಭೀರ ಗಾಯವಾಗಿದೆ.
ತರೀಕೆರೆ ತಾಲೂಕಿನ ಕಲ್ಲತ್ತಿಗರಿ ದೇವಸ್ಥಾನದ ಬಳಿ ಈ ಅವಘಡ ನಡೆದಿದೆ. ಈ ಅವಘಡದಿಂದ ಆಟೋ ಹಾಗೂ ಕಾರಿ ಜಖಂ ಆದರೂ, ಅದರಲ್ಲಿದ್ದವರು ಜೀವಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ಕೈ ಮೂಳೆ ಮುರಿದಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಚಾಲಕ ತರೀಕೆರೆ ತಾಲೂಕಿನ ಗೇರಮರಡಿ ಮೂಲದವರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ದಾವಣಗೆರೆ ಮೂಲದದವರಾಗಿದ್ದರು. ಎರಡೂ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.



