sofia

 

 

ಗುರುವಾರ ರಾತ್ರಿ ಭಾರತದ 36 ಕಡೆ 400 ಮಿಸೈಲ್ ಬಳಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ  ಅಧಿಕೃತ ಮಾಹಿತಿ ನೀಡಿದ್ದಾರೆ.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ರಾತ್ರಿ 8ರಿಂದ 9 ಗಂಟೆಗೆ ಆರಂಭವಾಗಿ ಮಧ್ಯರಾತ್ರಿವರೆಗೂ ಭಾರತದ ಮೇಲೆ ಪಾಕಿಸ್ತಾನ ನಿರಂತರ ದಾಳಿ ನಡೆಸಿದೆ. 36 ಕಡೆ 300ರಿಂದ 400 ಪಾಕ್ ಡ್ರೋನ್ ಮಿಸೈಲ್ ದಾಳಿ ಮಾಡಿದೆ. ಪಾಕ್‌ನ ಎಲ್ಲಾ ಮಿಸೈಲ್‌ಗಳನ್ನು ನಾಶ ಮಾಡಲಾಗಿದೆ. ಅಲ್ಲದೇ ಗುಂಡಿನ ದಾಳಿಯನ್ನೂ ಮಾಡಿದೆ. ಪಾಕಿಸ್ತಾನ ಎಲ್‌ಒಸಿಯಲ್ಲಿ ಗುಂಡಿನ ದಾಳಿ ಮಾಡಿದೆ. ಪಂಜಾಬ್, ಭಟಿಂಡಾ ಸೇನಾ ನೆಲೆ ಮೇಲೆ ಪಾಕ್ ದಾಳಿಗೆ ಯತ್ನಿಸಿದೆ ಎಂದರು.

ಪಾಕಿಸ್ತಾನ ತನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸ್ಥಗಿತ ಮಾಡಿಲ್ಲ. ಪಾಕಿಸ್ತಾನ, ಭಾರತದ ಏರ್ ಸ್ಟೇಷನ್‌ಗಳ ಮೇಲೆ ದಾಳಿ ಮಾಡಲು ಯತ್ನಿಸಿದೆ. ತನ್ನ ನಾಗರಿಕ ವಿಮಾನ ಬಳಸಿಕೊಂಡು ಬೇಜವಾಬ್ದಾರಿತನ ತೋರಿದೆ. ಈ ಮೂಲಕ ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮಗಳನ್ನ ಉಲ್ಲಘಂನೆ ಮಾಡಿದೆ. ಆದರೆ ಭಾರತ ನಾಗರಿಕರಿಗೆ ಧಕ್ಕೆಯಾಗದಂತೆ ಪ್ರತಿದಾಳಿ ಮಾಡಿದೆ. ಈ ಮೂಲಕ ಭಾರತ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ತಿಳಿಸಿದರು.

ಟರ್ಕಿಯ ಡ್ರೋನ್‌ಗಳನ್ನು ಬಳಸಿಕೊಂಡು ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿದೆ. ಕೈನೆಟಿಕ್ ಮತ್ತು ನಾನ್ ಕೈನೆಟಿಕ್ ಎರಡೂ ರೀತಿಯಲ್ಲೂ ಪಾಕ್ ಡ್ರೋನ್‌ಗಳನ್ನು ನಾಶಪಡಿಸಲಾಗಿದೆ. ಡ್ರೋನ್‌ನ ಅವಶೇಷಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ವರದಿಯಲ್ಲಿ ಇದು ಟರ್ಕಿ ನಿರ್ಮಿತ ಡ್ರೋನ್‌ಗಳು ಎಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ