February 13, 2026

 

 

ಶ್ರೀ ಚೌಡೇಶ್ವರಿ ಸೇವಾ ಸಮಿತಿ, ಕುರುಕುಮಕ್ಕಿ, ಛತ್ರಮೈದಾನ, ಮೂಡಿಗೆರೆ ಇವರ ವತಿಯಿಂದ ಶ್ರೀ ಚೌಡೇಶ್ವರಿಯ ವಾರ್ಷಿಕ ಪೂಜೆ ದಿನಾಂಕ : 19-05-2025ನೇ ಸೋಮವಾರ ಹಾಗೂ 20-05-2025ನೇ ಮಂಗಳವಾರ ನೆರವೇರಲಿದೆ ಎಂದು ಸಮಿತಿಯ ಅಧ್ಯಕ್ಷ ಡಿ.ಕೆ. ಉದಯಶಂಕರ್ ತಿಳಿಸಿದ್ದಾರೆ.

ಅವರು ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ್ದು ; ದಿನಾಂಕ : 19-05-2025ನೇ ಸೋಮವಾರ ಬೆಳಿಗ್ಗೆ ಅಭಿಷೇಕ, ಗಣಪತಿ ಹೋಮ “ಶ್ರೀ ಚೌಡೇಶ್ವರಿ ಕಲಾಸಾನ್ನಿಧ್ಯ ಹೋಮ” ನಂತರ  ಪೂರ್ಣಾಹುತಿ, ಮಹಾಪೂಜೆ, ಮಂಗಳಾರತಿ. ನಂತರ ಪ್ರಸಾದ (ಉಪಹಾರ) ವಿನಿಯೋಗ ಏರ್ಪಡಿಸಲಾಗಿದೆ. ಇದೇ ದಿನ ಸಂಜೆ 7 ಗಂಟೆಗೆ ಶ್ರೀ ದೇವಿಗೆ ಕುಂಕುಮಾರ್ಚನೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗವಿರುತ್ತದೆ. ಶ್ರೀ ಚೌಡೇಶ್ವರಿ ಅಮ್ಮನವರಿಗೆ ಸಂಬಂಧಪಟ್ಟ ಸರಪಕ ಭೂತಪ್ಪ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮವಿರುತ್ತದೆ. ಸಂಜೆ 4 ಗಂಟೆಗೆ ವಾದ್ಯಗೋಷ್ಠಿ ಹಾಗೂ ಪಟಾಕಿ ಸಿಡಿಮದ್ದುಗಳೊಂದಿಗೆ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಗಂಗೆ ತರುವ ಕಾರ್ಯಕ್ರಮ ಇರುತ್ತದೆ.

ದಿನಾಂಕ : 20-5-2025ನೇ ಮಂಗಳವಾರ ಬೆಳಿಗ್ಗೆ 7-00 ಗಂಟೆಗೆ ಶ್ರೀ ದೇವಿಗೆ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗವಿರುತ್ತದೆ. ಇದೇ ದಿನ ಮಧ್ಯಾಹ್ನ 1-00 ಗಂಟೆಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಎಲ್ಲಾ ಪೂಜಾ ಕಾರ್ಯಕ್ರಮಗಳು  ಕೆ. ಸಿ. ಮಹಾಬಲ ಕಾರಂತ್ ಇವರ ನೇತೃತ್ವದಲ್ಲಿ ನಡೆಯಲಿದೆ.

ಅನ್ನಸಂತರ್ಪಣೆಗೆ ಹೆಚ್ಚಿನ ಕೊಡುಗೆಯನ್ನು ಶ್ರೀಮತಿ ಶುಭ ಮತ್ತು ಶ್ರೀಯುತ ವಿಕ್ರಮ್ ಹಾಗೂ ಮಕ್ಕಳು, ಕುನ್ನಹಳ್ಳಿ ಹಾಗೂಹೂವಿನ ಅಲಂಕಾರಕ್ಕೆ ಹೆಚ್.ಜಿ.ಜಯಕುಮಾರ್ ಹಳಸೆ ಇವರು ಕೊಡುಗೆ ನೀಡಿರುತ್ತಾರೆ. ಕಾರ್ಯಕ್ರಮಕ್ಕೆ ಮೂಡಿಗೆರೆ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಹೆಚ್ಚಿನ ಸಹಕಾರ ನೀಡಿರುತ್ತಾರೆ.

ಈ ಎರಡೂ ದಿನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಅನ್ನಸಂತರ್ಪಣೆಯಲ್ಲಿ ಸಮಸ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಚೌಡೇಶ್ವರಿಯ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಕೋರಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ