ಜಗದ್ಗುರು ರೇಣುಕಾಚಾರ್ಯ ಹಾಗೂ ಜಗಜ್ಯೋತಿ ಬಸವೇಶ್ವರ ಈಸಮ ಸಮಾಜದ ಎರಡು ಕಣ್ಣುಗಳು ಇದ್ದಹಾಗೆ ಎಂದು ಮಾಚಗೊಂಡನ ಹಳ್ಳಿ ಬೇರುಗಂಡಿಬ್ರ ಹನ್ಮಠದ ಷ||ಬ್ರ||ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿ ಗಳು ಹೇಳಿದರು.
ಮೂಡಿಗೆರೆ ಮಹಾಂತಿನ ಮಠ ಆವರಣ ದಲ್ಲಿ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ಜಯಂತಿ.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಹಿಳಾ ಹಾಗೂ ಯುವ ಘಟಕ ಪದಗ್ರಹಣ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರುವೀರಶೈವ ಧರ್ಮ ದ ಮಹಾನ್ ಶರಣ ಮತ್ತು ಗುರು ಗಳಲ್ಲಿ ಒಬ್ಬರು ಇವರ ತತ್ವ ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆ ಗಳು ಮತ್ತು ಬಸವಣ್ಣ ನವರಸಾಮಾಜಿಕ ನ್ಯಾಯ ಕಾಯಕ ಯೋಗ ಮಹಿಳಾ ಸಬಲೀಕರಣ ವಿಚಾರಧಾರೆ. ಚಿಂತನೆ ಸಂದೇಶ ಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಮಾನವಧರ್ಮಕ್ಕೆ ಜಯ ವಾಗಲಿ ಧರ್ಮ ದಿಂದಲೇ ವಿಶ್ವ ಕ್ಕೆ ಶಾಂತಿ ಎಂಬ ಸಂದೇಶ ಗಳನ್ನು ಜಗದ್ಗುರು ರೇಣುಕಾಚಾರ್ಯ ರು ಜಗತ್ತಿಗೆ ಸಾರಿದ್ದಾರೆ ವಿಶ್ವ ಕಂಡ ಮೇರು ವ್ಯಕ್ತಿತ್ವ ದ ದಾರ್ಶನಿಕರರಾದ ರೇಣುಕಾಚಾರ್ಯ ಹಾಗೂ ಬಸವಣ್ಣ ಇಂತಹ ಮಹನೀಯರು ಸದಾ ಸ್ಮರಣೆ ಮಾಡಬೇಕು ಎಂದರು.

ಅಖಿಲಭರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯನಿರ್ವಾಹಕ ನಿರ್ದೇಶಕ ಡಾ||ಮೋಹನ್ ರಾಜಣ್ಣ ಪ್ರಾಸ್ತಾವಿಕ ವಾಗಿ ಮಾತನಾಡುತ್ತಾ ರೇಣುಕಾಚಾರ್ಯ ರು ವೀರಶೈವ ಧರ್ಮ ಸ್ಥಾಪಿಸಿದರೆ ನಂತರ ಇದನ್ನು ಬಸವಣ್ಣ ನವರು ಶರಣ ಸಂಸ್ಕೃತಿ ಎಂದು ಪ್ರತಿ ಪಾದಿಸಿದರು ಎಂದರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ.ಹೆಚ್.ಎಂ.ಲೋಕೇಶ್ ರವರು ಮಹಿಳಾ ಘಟಕ ಮತ್ತು ಯುವ ಘಟಕದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಆದುನಿಕ ವಚನಕಾರರಾದ ಶ್ರೀ ರುದ್ರಮೂರ್ತಿ ಎಲೆರಾoಪುರ. ಇವರಿಂದ ಸರಳ ವಚನ ಗಳಲ್ಲಿ ವೀರಶೈವ ಲಿಂಗಾಯತ ಧರ್ಮ ಎಂಬ ವಿಷಯ ದ ಅತ್ಯುತ್ತಮ ವಾಗಿ ಉಪನ್ಯಾಸನೆಡೆಯಿತು.
ಮಹಿಳಾ ಘಟಕದ ಅಧ್ಯಕ್ಷ ರಾಗಿ ರಾಜಲಕ್ಸ್ಮಿ ಕಾಂತರಾಜ್ ಮತ್ತು ಯುವ ಘಟಕದ ಅಧ್ಯಕ್ಷರಾಗಿ ಎ.ಎನ್. ಪ್ರತಾಪ್ ರವರು ಹಾಗೂ ಅವರ ತಂಡ ದವರು ಜವಾಬ್ದಾರಿ ಸ್ವೀಕರಿಸಿದರು..
ರಾಜ್ಯ ಕಾರ್ಯನಿರ್ವಾಹಕ ನಿರ್ದೇಶಕಎಂ ಆರ್ ಪೂರ್ಣೇಶ್ ಮೂರ್ತಿ. ಮತ್ತು ಮಹಿಳಾ ಘಟಕದ ಅಧ್ಯಕ್ಷಣಿ ರಾಜಲಕ್ಸ್ಮಿ ಕಾಂತರಾಜ ಮಾತನಾಡಿದರು.

ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ.ಅತೀ ಹೆಚ್ಚು ಅಂಕ ಗಳಿಸಿದ 16ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಿದರು..
ಜಿಲ್ಲಾ ಯುವ ಘಟಕಅಧ್ಯಕ್ಷ ಶಿವಕುಮಾರ್. ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ.ಕೆ.ಸಿ. ನಿಶಾಂತ್. ರಾಜ್ಯ ಮಹಿಳಾ ನಿರ್ದೇಶಕಿ ಶ್ರೀಮತಿ ಕಲಾರುದ್ರೇಶ್.
ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿ ಅನಿಲ್, ಕೆ ಆರ್ ದ್ರುವ ಕುಮಾರ್. ರುದ್ರಮುನಿ. ಜಿಲ್ಲಾ ನಿರ್ದೇಶಕರಾದ ಎಂ.ಡಿ.ಇಂದ್ರೇಶ್. ಲತಾ ರವಿ.
ಜ್ಯೋತಿ ಪ್ರಭು ಕುಮಾರ್. ಬಿ. ಬಸವರಾಜ್.ಅಶೋಕ್. ಶಿವಕುಮಾರ್. ಕಡೂರು ರೇಣುಕಪ್ಪ. ಎಂ.ಸಿ.ಆದರ್ಶ. ಬಿ. ಕೆ.ಚಂದ್ರಶೇಖರ್, ಸಿ.ಎಸ್.ಚಂದ್ರಶೇಖರ್ ಹಾಗೂ ಮುಂತಾದ ವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ಯನ್ನು ಬಿ ಎಸ್ ಒಂಕಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವಿ ಪಟೇಲ್ ಕೂವೆ ರವರು ವಂದಿಸಿದರು.
ಶಕುಂತಲಾ ಪಾಟೀಲ್ ರವರು ಕಾರ್ಯಕ್ರಮ ನಿರೂಪಿಸಿದರು.
ತುಮಕೂರು ರುದ್ರಮೂರ್ತಿ ಎಲೆ ರಾಂಪುರ ಮತ್ತು ಪುಷ್ಪ ರವರಿಂದ ಭಕ್ತಿ ಗೀತೆ ಹಾಗೂ ವಚನ ಗಾಯನ ನೆಡೆಯಿತು..



