ಸಾಹಿತಿ, ಕನ್ನಡ ಉಪನ್ಯಾಸಕ ಉಮೇಶ್ ಹೊಸಹಳ್ಳಿ ಯವರು ಪದವಿಪೂರ್ವ ಕಾಲೇಜು ಪ್ರಾನ್ಸುಪಾಲರಾಗಿ ಬಡ್ತಿ ಹೊಂದಿರುತ್ತಾರೆ.
ಇವರು ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ, 28 ವರ್ಷ ಸೇವೆ ಸಲ್ಲಿಸಿ ಈಗ ಪ್ರಾನ್ಸುಪಾಲರಾಗಿ ಬಡ್ತಿ ಹೊಂದಿದ್ದು ಹಾಸನ ಜಿಲ್ಲೆ ಜಾವಗಲ್ ಸರಕಾರಿ ಕಾಲೇಜಿಗೆ ನೇಮಕಾಗೊಂಡಿದ್ದಾರೆ.
ಕವಿ, ಲೇಖಕ, ಭಾಷಣಕಾರರು ಆದ ಇವರ ನೂರಾರು ಲೇಖನಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮದರಾಸು, ಮಡಿಕೇರಿ, ಮಂಗಳೂರು, ಹಾಸನ ಆಕಾಶವಾಣಿ ಗಳಲ್ಲಿ ಕಥೆ, ಕವನ, ಭಾಷಣ, ಚಿಂತನಗಳು ಪ್ರಸಾರವಾಗಿವೆ. ಇವರ ಹಲವಾರು ಕೃತಿಗಳು ಪ್ರಕಟವಾಗಿದ್ದು ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ದಕ್ಷಿಣ ಕನ್ನಡ, ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಉಮೇಶ್ ಅವರು ಮೂಡಿಗೆರೆ ತಾಲ್ಲೂಕು ಊರುಬಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಯು.ಹೊಸಳ್ಳಿ ಗ್ರಾಮದವರು. ಕೃಷಿಕ ಕುಟುಂಬದ ಹಿನ್ನಲೆಯಲ್ಲಿ ಬಂದು ಉನ್ನತ ವಿದ್ಯಾಭ್ಯಾಸ ಮಾಡಿ ಕನ್ನಡ ಉಪನ್ಯಾಸಕರಾಗಿದ್ದು ಜೊತೆಗೆ ಕನ್ನಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಕೃತಿಗಳಲ್ಲಿ ಮಲೆನಾಡಿನ ಜೀವನ ಕ್ರಮಗಳು, ಇಲ್ಲಿನ ಸಂಸ್ಕೃತಿಯ ಬಗ್ಗೆ ವಿಶೇಷ ಬೆಳಕು ಚೆಲ್ಲಿದ್ಧಾರೆ.
ಪ್ರಾಂಶುಪಾಲರಾಗಿ ಆಯ್ಕೆಯಾಗಿರುವ ಸಂದರ್ಭದಲ್ಲಿ ಅವರ ಕುಟುಂಬದವರು, ಬಂಧುಗಳು ಮತ್ತು ಸ್ನೇಹಿತರ ಬಳಗ ಉಮೇಶ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



