kreede

 

 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳಿಕೆ ಗ್ರಾಮದ  ಲೀಲಾವತಿ ಹಾಗೂ ಮಂಜುನಾಥ್ (ಪಾಪಣ್ಣ) ದಂಪತಿಗಳ ಮಗನಾದ ಜೀವನ್ ಹೆಚ್ ಎಂ  ಉತ್ತಮ ವಾಲಿಬಾಲ್ ಆಟಗಾರ. ಹಾಸನದ HRIHE( ಹಾರನಹಳ್ಳಿ ರಾಮಸ್ವಾಮಿ ಇನ್ಸ್ಟಿಟ್ಯೂಟ್ of ಹೈಯರ್ ಎಜುಕೇಶನ್ ) ಕಾಲೇಜಿನಲ್ಲಿ ತೃತೀಯ ವರ್ಷದ BBA ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ .

ಇವರು ಭಾರತೀಯ ಸೇನೆಯ ASC ( Army service corps) ವಿಭಾಗದಲ್ಲಿ ಸ್ಪೋರ್ಟ್ಸ್ ಕೋಟದಡಿಯಲ್ಲಿ ನೌಕರಿಯನ್ನು ಪಡೆದುಕೊಂಡಿರುತ್ತಾರೆ. ನಮ್ಮ  ಜಿಲ್ಲೆಯಲ್ಲಿ ವಾಲಿಬಾಲ್ ಆಟದ ಮೂಲಕ ಮೊಟ್ಟಮೊದಲ   ಬಾರಿಗೆ ಒಬ್ಬ ಯುವಕ 21 ನೇ ವಯಸ್ಸಿಗೆ ಸೇನೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಿರುವುದು  ನಮ್ಮೆಲ್ಲರ ಹೆಮ್ಮೆ.

2024ರಲ್ಲಿ ಕೇರಳದ  ತಿರುವನನಂಥಪುರಂ ನ. ಜಿಮ್ಮಿ ಜಾರ್ಜ್ ಇಂಡೋರ್ ಸ್ಟೇಡಿಯಂನಲ್ಲಿ ನೆಡೆದ ಸೌತ್ ಝೋನ್ ಇಂಟೆರ್ ಯೂನಿವರ್ಸಿಟಿ ವಾಲಿಬಾಲ್ ಟೂರ್ನಮೆಂಟ್ ಪಂದ್ಯಾವಳಿಯಲ್ಲಿ  ವಿಶ್ವವಿದ್ಯಾಲಯದ ಪ್ರಮುಖ  ಆಟಗಾರರಾಗಿದ್ದರು.

2025 ರಲ್ಲಿ ಆಂಧ್ರ ಪ್ರದೇಶದ. ಜವಾಹಾರ್ಲಾಲ್ ನೆಹರು ಟೆಕ್ನಾಲಜಿಕಲ್ ಯೂನಿವರ್ಸಿಟಿ ಕಾಕಿನಾಡ್ ನಲ್ಲಿ ನೆಡೆದ. ಸೌತ್ ಝೋನ್ ಇಂಟರ್ ಯೂನಿವರ್ಸಿಟಿ ವಾಲಿಬಾಲ್ ಟೂರ್ನಮೆಂಟ್ಸ್ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯದ ಪ್ರಮುಖ ಆಲ್ರೌಂಡರ್  ಆಟಗಾರಾಗಿ ಗುರುತಿಸಿಕೊಂಡಿದ್ದರು.

ಅಭಿನಂದನೆಗಳು ಜೀವನ್  ನಿಮ್ಮ ಮುಂದಿನ ಕ್ರೀಡಾ ಭವಿಷ್ಯ ಭಾರತ ತಂಡವನ್ನು ಪ್ರತಿನಿಧಿಸುವತ್ತ ಸಾಗಲಿ. ಭಾರತೀಯ ಸೇನೆಯಲ್ಲಿ ನಿಮ್ಮ ಸೇವೆ ಅಚ್ಚಳಿಯದೆ ಉಳಿಯಲಿ.

ವರದಿ : ಮೋಹನ್ ಬಡವನದಿಣ್ಣೆ , ಪತ್ರಿಕೋದ್ಯಮ ವಿದ್ಯಾರ್ಥಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ