ಕರುನಾಡಿನ ಸಾಂಸ್ಕೃತಿಕ ಅಸ್ಮಿತೆ ನಮ್ಮ ಜನಪದ , ನಮ್ಮ ಜನಪದರು ಕೂಡಿ ಬಾಳುವ ಬದುಕುವ ಬೆಳೆಯುವ ಸೌಹಾರ್ದ ಪರಂಪರೆಯ ರೂವಾರಿಗಳು, ಅವರಿಗೆ ಅಕ್ಷರ ಬಾರದಿದ್ದರೂ ವಿವೇಕಕ್ಕೆ ಬರವಿರಲಿಲ್ಲಿ. ನಮ್ಮ ಹಿರಿಕರ ಸೌಹಾರ್ದ ಪರಂಪರೆಯನ್ನು ರೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಶೃಂಗೇರಿ ಪಟ್ಟಣದ ಶ್ರೀ ಬಾಲಗಂಗಾಧರನಾಥ್ ಮಹಾವಿದ್ಯಾಲಯದಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನವು ಹಮ್ಮಿಕೊಂಡ ಜ್ಞಾನ ಪುಷ್ಪ ಮಾಲಿಕೆಯಲ್ಲಿ ಜನಪದ ಸಾಹಿತ್ಯದಲ್ಲಿ ಸೌಹಾರ್ದ ನೆಲೆಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು
ಜನಪದರು ಜಾತ್ರೆ ಹಬ್ಬ ಉತ್ಸವಗಳಲ್ಲಿ ಕೂಡಿ ಬೆರೆಯುವ ಸಹಪಂಕ್ತಿ ಭೋಜನ ಮಾಡುವ ಸೌಹಾರ್ದ ನಡೆಗಳಿಗೆ ಮಾದರಿಯಾದವರು, ಬನ್ನಿ ಮುಡಿಯೋಣ ಬನ್ನಿ ಹ್ಯಾವ ಮರಿಯೋಣ ಬನ್ನಿ ಎಂದು ಹೇಳಿ ತಮ್ಮೊಳಗಿನ ಸಿಟ್ಟು ,ದ್ವೇಷ ಅಸೂಯೆಗಳಿಗೆ ತಿಲಾಂಜಲಿ ಇಡಲು ಪ್ರಯತ್ನಿಸಿ, ಸ್ನೇಹ ಭಾವ ಬಂಧನ ಬೆಸಿಯಲು ಮುಂದಡಿಯಿಟ್ಟವರು, ಉತ್ತರ ಕರ್ನಾಟಕದ ಮೊಹರಂ ಹಬ್ಬದಲ್ಲಿ ಹಿಂದೂ ಮುಸಲ್ಮಾನರು ಎಲ್ಲಾ ಜಾತಿ ಧರ್ಮಗಳ ಜನರು ಬೆರೆತು ಹಬ್ಬ ಆಚರಿಸುವ, ಜಾತ್ರೆ ಉತ್ಸವಗಳಲ್ಲಿ ಪಾಲ್ಗೊಳ್ಳುವ, ಶವಸಂಸ್ಕಾರದಲ್ಲಿ ಬೆರೆತು ಮಾನವೀಯತೆಗೆ ಮೆರುಗು ತಂದವರು, ಹಾಡು ಕುಣಿತ ಗಾದೆ ಕಥೆಗಳ ಮೂಲಕ ಸೌಹಾರ್ದದ ಎಳೆಗಳನ್ನು ಗಟ್ಟಿಗೊಳಿಸಲು ಅವಿರತವಾಗಿ ಶ್ರಮಿಸಿದವರು, ಜಾತಿ ಧರ್ಮದ ಸಂಕೋಲೆಗಳನ್ನು ಮೀರಿ ಸ್ನೇಹದ ಬೆಸುಗೆಗೆ ಕೈಚಾಚಿದವರು, ನಮ್ಮ ಜನಪದರು ರೂಡಿಸಿಕೊಂಡ ಬಂದ ಇಂಥ ಸೌಹಾರ್ದ ಪರಂಪರೆಯು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಹಾಗೂ ಅನುಸರಿಸಬೇಕು ಇಂಥ ಅನುಸರಣೆಯ ಅನುಕ್ರಮಗಳ ಮೂಲಕ ಸೌಹಾರ್ದ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಅಗತ್ಯತೆ ಇದೆ ಎಂದರು
ಸಮಾರಂಭವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ನಾಗೇಶ್ ಕೆ ಸಿ ಅವರು ಉದ್ಘಾಟಿಸಿ ವಿದ್ಯಾರ್ಥಿ ಯುವ ಜನರು ಜನಪದದ ಅರಿವನ್ನು ಹೊಂದಬೇಕು, ನಮ್ಮ ಕಲೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಧ್ಯಾಯನಿಸಿ ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು,

ಪ್ರತಿಷ್ಠಾನದ ಸಂಸ್ಥಾಪಕರಾದ ಡಾ.ಮೋಹನ್ ರಾಜಣ್ಣನವರು ಪ್ರಸ್ತಾವಿಕವಾಗಿ ಮಾತನಾಡಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನವು ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯನ್ನು ವಿದ್ಯಾರ್ಥಿ ಯುವಜನರಿಗೆ ಅರ್ಥೈಸುವಲ್ಲಿ ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸಿದೆ, ಜಾತಿ ಧರ್ಮ ಇನ್ನಿತರ ಅಂಶಗಳನ್ನು ಗುರಾಣಿಯಾಗಿ ಮಾಡಿಕೊಂಡು ಜನರ ಮನಸ್ಸನ್ನು ಒಡೆಯುತ್ತಿರುವ ಈ ಸಂದಿಗ್ಧ ವಿಷಮ ಸಂದರ್ಭದಲ್ಲಿ ಸೌಹಾರ್ದ ನೆಲೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು,
ಅತಿಥಿಗಳಾದ ರಮೇಶ್ ಶೊನ್ಯಹಾಗೂ ಅಂಗುರಡಿ ದಿನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ತಿ ಶ್ರೀಮತಿ ಉಮಾ ಮೋಹನ್. ಶ್ರೀಮತಿ ಅನಿತಮಹೇಶ್. ಕು.ದೀಕ್ಷಾ.ಶೃಂಗೇರಿ ಶಿವಣ್ಣ. ಸತ್ಯನಾರಾಯಣ. ಆನಂದ ಸ್ವಾಮಿ.ಡಾ. ಧನ್ಯಕುಮಾರ್. ಶಂಕರ್ ನಾಯ್ಕ. ಶ್ರೀಮತಿ ಅಮೃತ.ಉಪಸ್ಥಿತರಿದ್ದರು.
ನಾಡಗೀತೆ ಯನ್ನು ಶ್ರೀ ರಕ್ಷಾ ತಂಡ ನೆರೆವರಿಸಿದರುಕುಮಾರಿ ಅನುಶ್ರೀ ಪ್ರಾರ್ಥಿಸಿ, ಕಿರಣ್ ಎಚ್ ಎಂ ಅವರು ಸ್ವಾಗತಿಸಿ, ಶ್ರೀಮತಿ ಸುಮಂಗಲ ಆನಂದಸ್ವಾಮಿ ನಿರೂಪಿಸಿ, ಕುಮಾರಿ ಮೇಘ ವಂದಿಸಿದರು.



