grahaka

 

 

ಅನಧಿಕೃತವಾಗಿ ಖಾತೆಯಿಂದ ವರ್ಗಾವಣೆಯಾದ ಹಣವನ್ನು ಮರಳಿ ತನ್ನ ಖಾತೆಗೆ ಜಮಾ ಮಾಡುವಂತೆ ಖಾತೆದಾರ ಕೋರಿದರೂ ಸ್ಪಂದಿಸದೆ ಸೇವಾ ನ್ಯೂನತೆ ಎಸಗಿತೆಂಬ ಆರೋಪದ ಹಿನ್ನೆಲೆಯಲ್ಲಿ ಎಸ್‍ಬಿಐ ಶಾಖೆ ವಿರುದ್ಧ ತೀರ್ಪು ನೀಡಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ಬಡ್ಡಿ ಸಹಿತ ಮೊತ್ತವನ್ನು ಖಾತೆದಾರನಿಗೆ ನೀಡುವಂತೆ ಬ್ಯಾಂಕ್‍ಗೆ ಆದೇಶಿಸಿದೆ.

ಚಿಕ್ಕಮಗಳೂರು ನಗರದ ಕಲ್ಯಾಣನಗರದ ಶಿಕ್ಷಕ ಬಿ.ಜಿ.ಪ್ರವೀಣ್ ಕುಮಾರ್ ಅವರು ಎಸ್‍ಬಿಐ ಹೊಸಮನೆ ಬಡಾವಣೆ ಶಾಖೆಯಲ್ಲಿ ಖಾತೆ ಹೊಂದಿದ್ದು, ಅವರ ಖಾತೆಯಿಂದ 1,97,800 ರೂ.ಗಳು ಅನಧಿಕೃತವಾಗಿ ವರ್ಗಾವಣೆಯಾಗಿತ್ತೆನ್ನಲಾಗಿದೆ. ಈ ಮೊತ್ತವನ್ನು ತಮ್ಮ ಖಾತೆಗೆ ಮರಳಿ ಜಮಾ ಮಾಡುವಂತೆ ಕೋರಿದರೂ ಬ್ಯಾಂಕ್ ಯಾವುದೇ ಕ್ರಮ ಕೈಗೊಳ್ಳದೆ ಸೇವಾ ನ್ಯೂನತೆ ಎಸಗಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕಳೆದ ಡಿಸೆಂಬರ್ 15 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಿದ ಆಯೋಗವು, ಅನಧಿಕೃತ ವರ್ಗಾವಣೆಯಾದ ಮೊತ್ತ 1,97,800 ರೂ.ಗಳನ್ನು ಪ್ರವೀಣ್ ಅವರ ಎಸ್‍ಬಿ ಖಾತೆಗೆ ಜಮೆ ಮಾಡುವಂತೆ ಸೂಚಿಸಿದೆ. ಅಲ್ಲದೆ, ಈ ಮೊತ್ತಕ್ಕೆ ವಾರ್ಷಿಕ ಶೇ.9ರ ಬಡ್ಡಿ ಯನ್ನು 2025ರ ಅಕ್ಟೋಬರ್ 3 ರಿಂದ ದುವರೆಗೆ ಪಾವತಿಸಬೇಕು ಮತ್ತು ಪರಿಹಾರವಾಗಿ 20,000 ರೂ. ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ 10,000 ರೂ.ಗಳನ್ನು ಖಾತೆದಾರನಿಗೆ ಪಾವತಿಸುವಂತೆ ಬ್ಯಾಂಕ್ ವಿರುದ್ಧ ನೀಡಿರುವ ತೀರ್ಪಿನಲ್ಲಿ ತಿಳಿಸಿದೆ. ಈ ತೀರ್ಪನ್ನು 45 ದಿನಗಳೊಳಗಾಗಿ ಪಾಲಿಸಬೇಕಿದ್ದು, ತಪ್ಪಿದಲ್ಲಿ ಆದೇಶದ ಮೊತ್ತವನ್ನು ಪಾವತಿಸುವವರೆಗೆ ವಾರ್ಷಿಕ ಶೇ.6 ರ ಬಡ್ಡಿಯನ್ನು ನೀಡುವಂತೆ ತಿಳಿಸಿದೆ.

ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಅವರು ಈ ಆದೇಶವನ್ನು ನೀಡುವ ಮೂಲಕ ಸೇವಾ ನ್ಯೂನತೆ ಆಗಿರುವುದನ್ನು ಪುರಾವೆ ಸಹಿತ ಸಾಬೀತುಪಡಿಸಿದ್ದು, ಗ್ರಾಹಕರಿಗೆ ನ್ಯಾಯ ಒದಗಿಸಿ ಹಿತರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಇಂದುಮತಿ ಬಾಯಿ ಬಿ.ಆರ್. ಆಯೋಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ