karatti 1

 

 

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ವಲಯ ಅರಣ್ಯ ವ್ಯಾಪ್ತಿಯ ಕಾರಟ್ಟಿ ಎಂಬಲ್ಲಿ ಕಾಡಾನೆ ದಾಳಿಯಿಂದ ಯುವಕನೋರ್ವ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಗುರುವಾರ ಮುಂಜಾನೆ ಕಾರಟ್ಟಿ ಗ್ರಾಮದ ಯೋಗೇಶ್ ತನ್ನ ಬೈಕಿನಲ್ಲಿ ಆಲ್ದೂರು ಕಡೆಗೆ ಬರುತ್ತಿದ್ದಾಗ ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ ಆತನ ಮೇಲೆ ದಾಳಿಗೆ ಮುಂದಾಗಿದ್ದು, ಯೋಗೇಶ್ ಗಾಬರಿಯಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಬದಿಗೆ ಬಿದ್ದಿದ್ದು, ಅಲ್ಲಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಕಳೆದ 4 ವರ್ಷಗಳಿಂದ ಕಾರೆಹಟ್ಟಿ ಗ್ರಾಮದ ಸುತ್ತ ಮುತ್ತಾ ಒಂಟಿ ಕಾಡಾನೆ ಉಪಟಳ ನೀಡುತ್ತಿದ್ದು, ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ, ವಾಹನ ಸವಾರರಿಗೆ, ತುಂಬಾ ಸಮಸ್ಯೆ ಉಂಟು ಮಾಡುತ್ತಿದೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಳ್ಳುತಿಲ್ಲ,, ಕಾಡಾನೆ ಬಂದಿದೆ ಅಂತ ಗ್ರಾಮಸ್ಥರು ಕರೆ ಮಾಡಿದರು, ಸರಿಯಾದ ಸಮಕ್ಕೆ ಬರೋದಿಲ್ಲ, ಸ್ಥಳೀಯ ರೈತರ ಕಾಡಾನೆ ಕಾಟದಿಂದ ತೋಟ ಪಾಳು ಬಿಡುವಂತಾಗಿದೆ.

ಆಲ್ದೂರು ಹೋಬಳಿ ಸತ್ತೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆಹಟ್ಟಿ, ಚಿಕ್ಕಳ, ಭಾಸಿನ್ ಖಾನ್, ಹಾರ್ಲಗದ್ದೆ, ಹಳ್ಳದಗಂಡಿ, ತೋಳೂರು ಗ್ರಾಮಗಳ ಜನರು ಈ ಒಂಟಿಸಲಗದ ಉಪಟಳದಿಂದ ಹೈರಾಣಾಗಿದ್ದಾರೆ. ಕಾಡಾನೆ ದಾಳಿಯಿಂದ ಅಪಾರ ಬೆಳೆನಷ್ಟವಾಗುತ್ತಿದೆ. ಜೊತೆಗೆ ತೋಟದ ಕೆಲಸಗಳಿಗೆ ತೆರಳು ಮಾಲೀಕರು ಮತ್ತು ಕಾರ್ಮಿಕರು ಭಯಪಡುವಂತಾಗಿದೆ. ಇದರಿಂದ ಬಹಳಷ್ಟು ಮಂದಿ ತಮ್ಮ ತೋಟಗಳನ್ನು ಪಾಳು ಬಿಟ್ಟಿದ್ದಾರೆ.

ಈ ಕಾಡಾನೆಯನ್ನು ತಕ್ಷಣ ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ದಾರೆ. ಆದರೆ ಜನರ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಗಮನಹರಿಸಿ ಕಾಡಾನೆ ಸ್ಥಳಾಂತರಕ್ಕೆ ಒತ್ತಡ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇಲ್ಲಿ ಸಂಚರಿಸುತ್ತಿರುವ ಒಂಟಿ ಸಲಗ ನಮಗೆ ವಿಪರೀತ ತೊಂದರೆ ನೀಡುತ್ತಿದೆ. ಇದರ ಚಲನವಲನಗಳ ಬಗ್ಗೆ ಸ್ಥಳೀಯರಿಗೆ ಅರಣ್ಯ ಇಲಾಖೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನಾವು ದಿನನಿತ್ಯ ಜೀವಭಯದಲ್ಲಿ ಜೀವನ ಮಾಡುವಂತಾಗಿದೆ. ನಮ್ಮ ನೋವಿಗೆ ಅರಣ್ಯ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲಿ ಯಾವುದೇ ಸ್ಪಂದನೆ ನೀಡುತ್ತಿಲ್ಲ. ತಕ್ಷಣ ಅರಣ್ಯ ಇಲಾಖೆ ಈ ಕಾಡಾನೆಯನ್ನು ಇಲ್ಲಿಂದ ಸ್ಥಳಾಂತರ ಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೋರುತ್ತೇವೆ.

ಯೋಗೇಶ್, ಕೃಷಿಕ, ಕಾರಹಟ್ಟಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ