vana 1

 

 

ಮೂಡಿಗೆರೆ ತಾಲ್ಲೂಕು, ಬಣಕಲ್ ನ ನಜರತ್ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೂಡಿಗೆರೆ ವಲಯ ಅರಣ್ಯಧಿಕಾರಿ  ಎಸ್.ಪಿ.ಕಾವ್ಯ  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಏಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಪ್ಲಾಸ್ಟಿಕ್ ವಸ್ತು ಮಣ್ಣಿನಲ್ಲಿ ಕರಗದೇ ಇರುವುದರಿಂದ ಪ್ಲಾಸ್ಟಿಕ್ ಪ್ರಾಣಿಗಳ ಹೊಟ್ಟೆ ಸೇರುತ್ತದೆ. ಪ್ಲಾಸ್ಟಿಕ್ ಬಳಕೆ ಅನೇಕ ರೋಗಗಳಿಗೆ ರಹದಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದರು. ಅತಿಥಿಗಳು 20 ವಿಧವಿಧವಾದ ಹಣ್ಣಿನ ಮತ್ತು 100 ಇತರೆ ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ  ಉಪ ವಲಯ ಅರಣ್ಯ ಅಧಿಕಾರಿ ಸುಹಾಸ್, ಶಾಲೆಯ ಪ್ರಾಂಶುಪಾಲರು ಸಿಸ್ಟರ್ ಹಿಲ್ಡಾ ಲೋಬೊ, ಶಿಕ್ಷಕಿಯರಾದ ರೇಖಾ, ರೇಷ್ಮಾ, ಚಂದನ, ಸಾಂಚಿತ, ಹಲೀಮಾ, ಅನುಷಾ, ಅನುಶ್ರೀ, ಪ್ರೆಸಿಲ್ಲ ಮೋನಿಸ್, ಸೇವೆರಿನ್, ಅಬಿದ, ಕೇಸರಿ, ರುಕ್ಷವಿ, ವಿನುತಾ, ಸಾಂಘವಿ, ಗಾಯಿತ್ರಿ, ಡಯಾನಾ, ಯಾಸ್ಮಿನ್, ವರ್ಷ ಪೈ, ಲಿನ್ಸಿ ಹಾಗೂ ಶಾಲಾ ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ