ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲಿಗೆ ಗ್ರಾಮದಲ್ಲಿ ಭಾರಿ ಮಳೆಗೆ ಭೂಕುಸಿತವಾಗಿದ್ದು. ತಾಲೂಕು ಆಡಳಿತ 5 ಕುಟುಂಬಗಳನ್ನು ಸ್ಥಳಾಂತರ ಮಾಡಿದೆ.

ಬಲಿಗೆ ಗ್ರಾಮದ ಶಾಲೆ. ಅಂಗನವಾಡಿ. ಹಾಗೂ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರವನ್ನು ತೆರೆದಿದ್ದು. ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತವೇ ನೀಡಿದೆ.
ಬಲಿಗೆ ಗ್ರಾಮದ ಭಾಸ್ಕರ. ಲಕ್ಷ್ಮಿ. ವೆಂಕಯ್ಯ. ಮುಕುಂದ. ಶೇಖರ. ಎಂಬುವವರ ಕುಟುಂಬಗಳನ್ನು ಬಲಿಗೆ ಶಾಲೆಯಲ್ಲಿ ತೆರೆದ ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ.
2019 ರಲ್ಲಿ ಈ ಭಾಗದಲ್ಲಿ ಬಾರಿ ಪ್ರಮಾಣದ ಭೂಕುಸಿತವಾಗಿದ್ದು ಬಲಿಗೆ, ಮದುಗುಂಡಿ, ಮಲೆಮನೆ, ಬಾಳೂರು, ಹೆಮ್ಮಕ್ಕಿ ಮುಂತಾದ ಕಡೆ ಹಲವಾರು ಮಂದಿ ಮನೆ ಹಾಗೂ ಆಸ್ತಿಪಾಸ್ತಿ ಕಳೆದುಕೊಂಡಿದ್ದರು. ಇದೀಗ ಅಂದಿನ ದುಸ್ವಪ್ನ ಮತ್ತೆ ಮರುಕಳಿಸುವ ಆತಂಕ ಸ್ಥಳಿಯರಲ್ಲಿ ಮನೆಮಾಡಿದೆ.



