19Mudigere1A Krushnappa

 

 

ಜು.9ರಂದು ಚಿಕ್ಕಮಗಳೂರಿನಲ್ಲಿ ಅಖಿಲ ಭಾರತ ಮುಷ್ಕರ
ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ 1961ರ ಅಡಿಯಲ್ಲಿ ದುಡಿಯುವ ಕಾರ್ಮಿಕರ ಕೆಲಸದ ಸಮಯವನ್ನು ಅಧಿಕಗೊಳಿಸಲು ನಿರ್ಧರಿಸಿರುವ ರಾಜ್ಯ ಸರಕಾರದ ನುಲುವನ್ನು ಕೂಡಲೇ ಹಿಂಪಡೆಯಬೇಕೆಂದು ಟಿಯುಸಿಐ ಜಿಲ್ಲಾ ಅಧಕ್ಷ ಕೆ.ಕೆ.ಕೃಷ್ಣಪ್ಪ ಒತ್ತಾಯಿಸಿದರು.

ಅವರು ಶುಕ್ರವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ ಅಡಿಯಲ್ಲಿ ವ್ಯಾಪಾರಸ್ಥರು, ಖಾಸಗಿ ಬ್ಯಾಂಕ್, ವಿಮೆ ಕಂಪನಿಗಳು, ಇದರಿಂದ ನೇಮಕಗೊಂಡ ಕಾರ್ಯ ಸಂಸ್ಥೆ, ಕಚೇರಿ ಕೆಲಸ, ಹೋಟೆಲ್, ರೆಸ್ಟೋರೆಂಟ್, ಫಲಹಾರ ಮಂದಿರ, ಭೋಜನ ಶಾಲೆ, ಚಿತ್ರಮಂದಿರ, ರಂಗಮಂದಿರ ಹೀಗೆ ನಾನಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ನಿಯಮ ಅನ್ವಯಿಸುತ್ತದೆ. ನಿಮಯದ ಪ್ರಕಾರ 1 ಗಂಟೆ ಅಧಿಕ ಕೆಲಸ ಮಾಡಿದರೆ ವಾರದಲ್ಲಿ ಎರಡು ರಜೆ ಮತ್ತು ಸಂಬಳ ಹೆಚ್ಚು ಸಿಗಬೇಕು. ಆದರೆ ಈ ಕ್ಷೇತ್ರದಲ್ಲಿ ದುಡಿಯುವ ವರ್ಗ ಬಹುತೇಕರು ಅಸಂಘಟಿತ ಕಾರ್ಮಿಕರು ಈ ಕಾಯ್ದೆಯಲ್ಲಿ ಯಾವುದೇ ಹಕ್ಕುಗಳನ್ನು ಪಡೆಯುವುದರಲ್ಲಿ ವಿಫಲರಾಗಿದ್ದಾರೆಂದು ಹೇಳಿದರು.

ಕೇಂದ್ರ ಬಿಜೆಪಿ ಸರಕಾರ 44 ಕಾರ್ಮಿಕ ಕಾಯ್ದೆ ರದ್ದು ಮಾಡಿ 4 ಸಂಹಿತೆ ಜಾರಿ ಮಾಡಲು ತಯಾರಿ ಸಂದರ್ಭದಲ್ಲಿ, ರಾಜ್ಯ ಕಾಂಗ್ರೆಸ್ ಸರಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಾ ಕೇಂದ್ರದ ಈ ನೀತಿಗೆ ಸಂಪೂರ್ಣ ಬೆಂಬಲಿಸಿದೆ. ಕೇಂದ್ರ ನೀತಿಗಳನ್ನೆಲ್ಲ ವಿರೋಧಿಸುತ್ತಾ ತಾವು ಪ್ರಗತಿಪರರೆಂದು ಹೇಳುತ್ತಾ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ರಾಜ್ಯಗಳಲ್ಲಿ ಕೈಗಾರಿಕಾ ಪ್ರದೇಶದಲ್ಲಿ ದುಡಿಯುವ ಅವಧಿ ಈಗಾಗಲೇ 12 ಗಂಟೆ ನಿಗದುಗೊಳಿಸಿರುವುದು ಕಾರ್ಮಿಕರಿಗೆ ಮಹಾ ದ್ರೋಹ ವೆಸಗಲಾಗಿದೆ. ಇದಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರ ಕೂಡ ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ದೂರಿದರು.

ಸೈದಾಂತಿಕ, ರಾಜಕೀಯ, ಸಾಂಸ್ಥಿಕ ಹಿನ್ನಡೆಗಳು ಅಂತರಾಷ್ಟ್ರೀಯ ಎಡ ಮತ್ತು ಕಾರ್ಮಿಕ ವರ್ಗದ ಚಳುವಳಿಯಿಂದ ಕಾರ್ಪೋರೇಟ್ ಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕ ವಲಯ ಕಲ್ಯಾಣ ನೀತಿಗಳು, ಶಾಸನಬದ್ಧ ಕಾರ್ಮಿಕ ಕಾನೂನುಗಳು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳು ಸೇರಿದಂತೆ ಕೇಂದ್ರದ ಕಾರ್ಮಿಕ ವಿರೋಧಿ ನೀತಿಗೆ ಪ್ರಾರಂಭಿಕ ಅಭಿವೃದ್ಧಿ ಮತ್ತು ಕಲ್ಯಾಣ ಒದಗಿಸುವುದು ರಾಜ್ಯ ಸರಕಾರದ ಮುಖ್ಯ ಉದ್ದೇಶವಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರದ ಈ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಸಮಸ್ತ ಕಾರ್ಮಿಕ ವರ್ಗವು ರಾಜರಹಿತ ಹೋರಾಟ ರೂಪಿಸಿದ್ದು, ಜುಲೈ 9 ರಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ನಡೆಸುವ ಅಖಿಲ ಭಾರತ ಮುಷ್ಕರದಲ್ಲಿ ಸಮಸ್ತ ಕಾರ್ಮಿಕ ವರ್ಗವು ಭಾಗವಹಿಸಬೇಕೆಂದು ಕರೆ ನೀಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ