ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಮೂಡಿಗೆರೆ ಘಟಕದ ಅಧ್ಯಕ್ಷರಾಗಿ ಹಿರಿಯ ವೈದ್ಯ ಡಾ. ರಾಮಚರಣ ಅಡ್ಯಂತಾಯ ಅಧಿಕಾರ ಸ್ವೀಕಾರ ಸ್ವೀಕಾರ ಮಾಡಿದ್ದಾರೆ.
ಶುಕ್ರವಾರ ಮೂಡಿಗೆರೆ ಜೇಸಿ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಡಾ. ರಾಮಚರಣ ಅಡ್ಯಂತಾಯ ಅವರು ಘಟಕದ 2025-26ನೇ ಸಾಲಿನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು.
ಡಾ. ರಾಮಚರಣ ಅಡ್ಯಂತಾಯ ಅವರು ಈ ಹಿಂದೆ ಮೂಡಿಗೆರೆ ಜೇಸಿಐ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಜೇಸಿಐ ನ ಹಿರಿಯ ಸದಸ್ಯರ ಸಂಘಟನೆ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಡಾ. ರಾಮಚರಣ ಅಡ್ಯಂತಾಯ ಅವರು ಕಳೆದ 53 ವರ್ಷಗಳಿಂದ ಮೂಡಿಗೆರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದಕೀಯ ವೃತ್ತಿಯ ಜೊತೆಗೆ ಜಿಲ್ಲಾ ಮತ್ತು ತಾಲ್ಲೂಕು ಬಂಟರ ಸಂಘ, ಮೂಡಿಗೆರೆ ತುಳುಕೂಟ, ಜಿಲ್ಲಾ ಮತ್ತು ತಾಲ್ಲೂಕು ಖಾಸಗಿ ವೈದ್ಯರ ಸಂಘ ಸೇರಿದಂತೆ ಹಲವು ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೂಡಿಗೆರೆ ವೇಣುಗೋಪಾಲ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರು ಮೂಡಿಗೆರೆ ಸೀನಿಯರ್ ಛೇಂಬರ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಘಟಕದ ನೂತನ ಕಾರ್ಯದರ್ಶಿಯಾಗಿ ಬಿ.ಎನ್. ಮನಮೋಹನ್, ಖಚಾಂಚಿಯಾಗಿ ವಿನೋದ್ ಕುಮಾರ್ ಶೆಟ್ಟಿ ಹಾಗೂ ನಿರ್ದೇಶಕರಾಗಿ ಹೆಚ್.ಸಿ. ಚಂದ್ರಕಾಂತ್, ಕೆಎಲ್ಎಸ್ ತೇಜಸ್ವಿ, ಹಾಲೂರು ರವಿ, ಅತುಲ್ ರಾವ್, ಪ್ರದೀಪ್ ಕುಮಾರ್, ಎಂ.ಆರ್. ಹರ್ಷವರ್ಧನ್, ರವಿಕುಮಾರ್, ಚಂದ್ರಶೇಖರ್ ಕುನ್ನಹಳ್ಳಿ, ನಯನ ಕಣಚೂರು, ಕೆ.ಎನ್. ರವಿ, ರವಿಶಂಕರ್ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಲಿಂಗಯ್ಯ, ಪೂರ್ವ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್. ಜಯೇಶ್, ಮೂಡಿಗೆರೆ ಘಟಕದ ಸಂಸ್ಥಾಪಕ ಅಧ್ಯಕ್ಷ ಎನ್.ಎಲ್. ಪುಣ್ಯಮೂರ್ತಿ, ನಿರ್ಗಮಿತಿ ಅಧ್ಯಕ್ಷ ಬಿ.ಬಸವರಾಜು, ನಿರ್ಗಮಿತಿ ಕಾರ್ಯದರ್ಶಿ ಪ್ರದೀಪ್ ದುಂಡುಗ ಉಪಸ್ಥಿತರಿದ್ದರು.


