ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ರಿಯಾಲಿಟಿ ಶೋ ನಲ್ಲಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಪ್ರತಿಭಾನ್ವಿತೆ ಸೌಗಂಧಿಕಾ ಭಾಗವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಸೌಗಂಧಿಕಾ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಶೃಂಗೇರಿ ಹತ್ತಿರದ ನಂದಿಗೋಡು ಸುರೇಂದ್ರ ಎನ್. ಎಸ್ ಮತ್ತು ಡಾ. ಅನಿತಾ ಹೆಗ್ಗೋಡು ಇವರ ಮಗಳು. ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯೆ ಶ್ರೀಮತಿ ಆಶಾ ಮೋಹನ್ ಅವರ ಸಹೋದರಿಯ ಪುತ್ರಿಯಾಗಿದ್ದಾರೆ.
ಸೌಗಂಧಿಕಾ ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ ಶೃಂಗೇರಿಯ ಬಿಜಿಎಸ್ ಮತ್ತು ಜೆ ಸಿ ಶಾಲೆಯಲ್ಲಿ ಓದಿದ್ದು. ಹೈಸ್ಕೂಲನ್ನು ಅನ್ನಪೂರ್ಣ ವಿದ್ಯಾಮಂದಿರ ಆಗುಂಬೆ . ಹಾಗೂ ಪಿಯುಸಿಯನ್ನು ಆದಿಚುಂಚನಗಿರಿ ಕಾಲೇಜು ಶಿವಮೊಗ್ಗ ಈಲ್ಲಿ ಓದಿರುತ್ತಾರೆ. ಆರ್ ವಿ ಕಾಲೇಜು ಬೆಂಗಳೂರು ಇಲ್ಲಿ ಇಂಜಿನಿಯರಿಂಗ್ ಮೆಕಾನಿಕಲ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಸೌಗಂಧಿಕಾ ಶೃಂಗೇರಿ ಹಾಗೂ ಹೆಗ್ಗೋಡು , ತೀರ್ಥಹಳ್ಳಿಯ ಪರಿಸರದಲ್ಲಿ ಬಾಲ್ಯವನ್ನು ಕಳೆದಿರುತ್ತಾರೆ. ಆದ್ದರಿಂದ ಮಲೆನಾಡಿನ ಎಲ್ಲಾ ಋತುಮಾನಗಳ , ಊಟ ಉಪಚಾರ , ಉಡುಗೆ ತೊಡುಗೆ ಗಳ ಹಾಗೂ ಹಬ್ಬ , ಸಂಪ್ರದಾಯಗಳ ದಟ್ಟ ಅನುಭವವಿರುತ್ತದೆ. ಮಾತನಾಡುವ ಗೊಂಬೆ ಹಾಗೂ ಜಾದು ಮಾಡುವುದನ್ನು ನಾಲ್ಕನೇ ತರಗತಿಯಿಂದಲೇ ಮಾಡಲು ಪ್ರಾರಂಭಿಸಿ ಶೃಂಗೇರಿಯಲ್ಲಿ ಭರತನಾಟ್ಯ , ಸಂಗೀತ ಅಭ್ಯಾಸವನ್ನು ಮಾಡಿದ್ದು, ಉತ್ತಮ ಕ್ರೀಡಾಪಟುವಾಗಿದ್ದು ಥ್ರೋಬಾಲ್ ನಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುತ್ತಾರೆ . ಅಥ್ಲೆಟಿಕ್ಸ್ ನಲ್ಲಿ ಸ್ಟೇಟ್ ಲೆವೆಲ್ ನಲ್ಲಿ ಭಾಗವಹಿಸಿರುತ್ತಾರೆ. ಆಂಕರಿಂಗ್ ಮತ್ತು ನಟನೆ ಅವರ ಇಷ್ಟವಾದ ಹವ್ಯಾಸವಾಗಿರುತ್ತದೆ.
ಸೌಗಂಧಿಕಾ ಹವ್ಯಾಸಿ ರಂಗಭೂಮಿಯಾದ ಟಿ ಎಸ್ ನಾಗಾಭರಣ ಅವರ ಬೆನಕ ತಂಡದ ರಂಗಭೂಮಿ ಕಲಾವಿದೆಯಾಗಿದ್ದಾರೆ. ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಕನ್ನಡ ಕಾರ್ವು ತಂಡದ ಸಾಂಸ್ಕೃತಿಕ ಚಟುವಟಿಗಳ ನೇತೃತ್ವವನ್ನು ವಹಿಸಿರುತ್ತಾರೆ.
ಇದೀಗ ಜೀ ಕನ್ನಡ ಮಹಾನಟಿ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಮೂಲಕ ದೊಡ್ಡ ವೇದಿಕೆಯಲ್ಲಿ ತನ್ನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಪಡೆದಿದ್ದಾರೆ. ಆರಂಭಿಕಾ ಕಂತುಗಳಲ್ಲಿಯೇ ತನ್ನ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮತ್ತು ತೀರ್ಪುಗಾರರ ಗಮನ ಸೆಳೆದಿದ್ದಾರೆ.



