kempegowda 1

 

 

ಕೆಂಪೇಗೌಡ ಒಕ್ಕಲಿಗರ ವೇದಿಕೆ, ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ನೂತನ ಅಧ್ಯಕ್ಷರಾಗಿ ಅಭಿಲಾಶ್ ಅತ್ತಿಗೆರೆ ಆಯ್ಕೆಯಾಗಿದ್ದಾರೆ.

ಶನಿವಾರ ಬಂಕೆನಹಳ್ಳಿ ಹೋಮ್ ಸ್ಟೇ ನಲ್ಲಿ ನಡೆದ ಬಣಕಲ್ ಹೋಬಳಿ ಕೆಂಪೇಗೌಡ ಒಕ್ಕಲಿಗರ ವೇದಿಕೆ ಸರ್ವ ಸದಸ್ಯರ ಸಭೆಯಲ್ಲಿ ಅಭಿಲಾಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಹೋಬಳಿ ಘಟಕದ ನೂತನ ಕಾರ್ಯದರ್ಶಿ ಆರ್ಯನ್ ಬಗ್ಗಸಗೋಡು ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಚಂದನ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗೌಡ ಬಕ್ಕಿ,  ಸಂಘಟನಾ ಕಾರ್ಯದರ್ಶಿ ಪ್ರೀತಮ್ ಗೌಡ ಮಾಡ್ಕಲ್, ಕಾರ್ಯದರ್ಶಿ ಪವನ್ ಗೌಡ ಪಟ್ಟದೂರು, ಉಸ್ತುವಾರಿ ಆದರ್ಶ್ ಗೌಡ ತರುವೆ, ಹಿರಿಯರಾದ ಸತೀಶ್ ಗೌಡ, ವಿನಯ್ ಗೌಡ, ವಿಕ್ರಮ್ ಗೌಡ, ಬಿ.ಎಂ. ಭರತ್ ಗೌಡ, ಸುಂದ್ರೇಶ್ ಗೌಡ ಕುಂದೂರು, ಸುಬ್ರಮಣ್ಯ ತ್ರಿಪುರ, ಪುಟ್ಟಣ್ಣ ಪಟ್ಟದೂರು, ಸಂದೇಶ್ ಗೌಡ ಹೊರಟ್ಟಿ ಇನ್ನು ಒಕ್ಕಲಿಗ ಹಿರಿಯಕಿರಿಯ ಹೋಬಳಿಯ ಸರ್ವ ಸದಸ್ಯರ ಉಪ ಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು,

ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷರಾದ ಬ್ರಿಜೇಶ್ ಗೌಡ ಕಡಿದಾಳು, ಮುಂಬರುವ ನಮ್ಮ ಒಕ್ಕಲಿಗ ಪೀಳಿಗೆಗೋಸ್ಕರ ನಮ್ಮ ಈ ಸಂಘಟನೆಯನ್ನು ಬಲಪಡಿಸಬೇಕಾಗಿದ್ದು ಹಾಗೂ ಒಕ್ಕಲಿಗರ ಹಿತಾಸಕ್ತಿ ಕಾಪಾಡಿಕೊಳ್ಳುವುದು ಇದರ ಉದ್ದೇಶವೇ ವಿನಹ ಬೇರೆ ಯಾವ ಜಾತಿ ಪಂಥಗಳ ವಿರುದ್ಧ ಹೊರಾಡುವ ಮನೋಭಾವನೆ ಯಾರಿಗೂ ಇಲ್ಲ, ಜನಗಣತಿಯಲ್ಲಿ ಒಕ್ಕಲಿಗರನ್ನು ಹಿಂದಿಡುವ ಕೆಲಸ ನಡೆಯುತ್ತಿದೆ ಹಾಗಾಗಿ ನಾವು ಜಾಗೃತರಾಗಬೇಕು ಎಂದು ತಿಳಿಸಿ ಸಂಘಟನೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು ಎಂದು ಎಚ್ಚರಿಸಿದರು. ಕೆಂಪೇಗೌಡ ಒಕ್ಕಲಿಗರ ವೇದಿಕೆಯು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಯುವಕರನ್ನು ಸಂಘಟಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡುತ್ತಿದೆ. ಸಂಘಟನೆಯು ನಮ್ಮ ಸಮುದಾಯದ ಹಿತಕಾಯುವಲ್ಲಿ ಮತ್ತು ಸಮಾಜದ ಎಲ್ಲಾ ವರ್ಗದವರಲ್ಲಿ ಸಮನ್ವಯತೆ ಸಾಧಿಸುವಲ್ಲಿ ಕಾರ್ಯನಿರತವಾಗಿದೆ. ಸಂಘಟನೆ ಒಕ್ಕಲಿಗರ ಸಮುದಾಯದ ಶ್ರೇಯೋಭಿವೃದ್ಧಿಯ ಜೊತೆಗೆ ರೈತರು, ಜನಸಾಮಾನ್ಯರ ಪರವಾಗಿ ಸದಾ ಧ್ವನಿಎತ್ತುವ ಕೆಲಸ ಮಾಡುತ್ತಾ ಬರುತ್ತಿದೆ. ಯುವಕರು ನಮ್ಮ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು. ನೂತನವಾಗಿ ಆಯ್ಕೆ ಆದ ಬಣಕಲ್ ಹೋಬಳಿಯ ಪದಾಧಿಕಾರಿಗಳಿಗೆ ಶುಭಹಾರೈಸಿದರು.

 

ಬಣಕಲ್ ಹೋಬಳಿಯ ಉಸ್ತುವಾರಿಗಳಾದ ಆದರ್ಶ್ ತರುವೆ ಶುಭಹಾರೈಸಿ ಜನಾಂಗದ ಏಳಿಗೆಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು, ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಲಿ ಅಧ್ಯಕ್ಷರಾದ ಚಂದನ್ ಗೌಡ ಅವರು ನನಗೆ ನೀಡಿದ ಸಹಕಾರ ಸಲಹೆಯನ್ನು ನೂತನ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ನೀಡಬೇಕೆಂದು ನೆರೆದಿದ್ದ ಒಕ್ಕಲಿಗ ನಾಯಕರುಗಳಿಗೆ ಮನವಿ ಮಾಡಿದರು.

ನೂತನ ಅಧ್ಯಕ್ಷರಾದ ಅಭಿಲಾಷ್ ಗೌಡ ಅತ್ತಿಗೆರೆ ಮಾತನಾಡಿ ಹೋಬಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ಜನಾಂಗದ ಏಳಿಗೆಗಾಗಿ ದುಡಿಯುವುದಾಗಿ ತಿಳಿಸಿದರು. ನೂತನ ಕಾರ್ಯದರ್ಶಿ ಆರ್ಯನ ಗೌಡ ಮಾತನಾಡಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.

ಒಕ್ಕಲಿಗ ಜನಾಂಗದ ಹಿರಿಯರು ಮಾತನಾಡಿ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಗಳಿಗೆ ಶುಭಹಾರೈಸಿ ಸಂಘದ ಸಾಧನೆ ಹಾಗೂ ಮೊನ್ನೆ ಚಿಕ್ಕಮಗಳೂರಿನಲ್ಲಿ ನೆಡೆದ ಬೆಳೆಗಾರರ ಸಮಾವೇಶಕ್ಕೆ ಮೂಡಿಗೆರೆಯ ಬೆಳೆಗಾರರನ್ನು ಒಟ್ಟು ಗೂಡಿಸುವಲ್ಲಿ ಸಂಘದ ಪಾತ್ರ ಅತಿ ಮುಖ್ಯವಾಗಿತ್ತು ಎಂದು ಪ್ರಶಂಸಿಸಿ ನಮ್ಮ ಈ ಸಂಘಟನೆಯ ಏಳಿಗೆಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಜಿಲ್ಲಾ ಅಧ್ಯಕ್ಷ ಬ್ರಿಜೇಶ್ ಕಡಿದಾಳು ಮಾತನಾಡಿ

ಸಂಘಟನೆ ತಾಲ್ಲೂಕು ಮತ್ತು ಹೋಬಳಿ ಘಟಕಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಉಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ