10Mudigere1A

 

 

ಮೂಡಿಗೆರೆ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹೆಚ್.ಎನ್. ಪ್ರಸಾದ್ ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಸಾದ್

ಅವರು ಬುಧವಾರ ಸಂಜೆ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಏರ್ಪಡಿಸಿದ್ದ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನೂತನ ಕಾರ್ಯದರ್ಶಿಯಾಗಿ ಕೆ.ವಿ.ವಿಕಾಸ್ ಅಧಿಕಾರ ವಹಿಸಿಕೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲಾ ಗವರ್ನರ್ ರವಿಶಂಕರ್ ಡಾಕೋಜು ಮಾತನಾಡಿ ; ಮಾನವನ ಹುಟ್ಟು ಕುಟುಂಬ ಹಾಗೂ ಉದ್ಯೋಗಕ್ಕೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಸಮಾಜಮುಖಿ ಕೆಲಸ ಮಾಡಿದಾಗ ಮಾತ್ರ ಹುಟ್ಟು ಸಾರ್ಥಕವಾಗುತ್ತದೆ. ರೋಟರಿ ಸಂಸ್ಥೆ ಪೊಲೀಯೋ ಲಸಿಕೆ ನೀಡುವಂತಹ ಮಹಾನ್ ಕಾರ್ಯ ಇಂದಿಗೂ ಜನರು ನೆನೆಯುತ್ತಾರೆ. ಪ್ರಸಕ್ತ ಕಾಲದಲ್ಲಿ ಪರಿಸರ ನಾಶವಾಗುತ್ತಿದೆ. ಹಾಗಾಗಿ ಪ್ರತಿ ರೋಟರಿ ಸದಸ್ಯರು ಕನಿಷ್ಟ 25 ಗಿಡಗಳನ್ನು ನೆಟ್ಟು ಅದನ್ನು ಪೋಷಿಸಿ ಪರಿಸರ ಉಳಿಸುವ ಜತೆಗೆ ಜಾಗೃತಿ ಕೂಡ ಮೂಡಿಸಬೇಕು. ಅಲ್ಲದೇ ನಿರಂತರವಾಗಿ ಜನಪರ ಕಾರ್ಯಕ್ರಮ ರೂಪಿಸಬೇಕೆಂದು ಸಲಹೆ ನೀಡಿದರು.

ರೋಟರಿ  ಸಹಾಯಕ ಗವರ್ನರ್ ಸಿ.ಎಸ್.ಮಹೇಶ್ ಮಾತನಾಡಿ, ಮಲೆನಾಡು ಭಾಗದಲ್ಲಿರುವ ಬಡ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ ನೀಡುವ ಮೂಲಕ ಶಿಕ್ಷಣ ದೊರಕಿಸುವ ಕಾರ್ಯ ಮಾಡಬೇಕು. ಎಲ್ಲಿ ನೋಡಿದರೂ ವಾಹನ ದಟ್ಟಣೆ ಅಧಿಕವಾಗಿದೆ. ಅದರಲ್ಲೂ ಮೂಡಿಗೆರೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಅಧಿಕವಾಗಿದೆ. ಹಾಗಾಗಿ ನಮ್ಮ ಸಂಸ್ಥೆ ಪೊಲೀಸ್ ಇಲಾಖೆ ಸಹಕಾರ ಪಡೆದು ಸಂಚಾರಿ ನಿಯಮ ಪಾಲಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಡಿ.ಬಿ.ನರೇಂದ್ರಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ರೋಟರಿ ನಿಕಟಪೂರ್ವ ಕಾರ್ಯದರ್ಶಿ ಟಿ.ನವೀನ್,  ವಲಯ ಲೆಫ್ಟಿನೆಂಟ್ ಎಚ್.ಎ.ಆದರ್ಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ