ಭಾರತ ಕಮ್ಯೂನಿಸ್ಟ್ ಪಕ್ಷದ ಮೂಡಿಗೆರೆ ತಾಲ್ಲೂಕು ಪ್ರತಿನಿಧಿ ಸಮ್ಮೇಳನ ಹಾಗೂ ಶತಮಾನ ಸಂಭ್ರಮ ಇಂದು ಮೂಡಿಗೆರೆಯ ಜೆ ಸಿ ಭವನದಲ್ಲಿ ನಡೆಯಿತು.
ಸಿಪಿಐ ಹಿರಿಯ ನಾಯಕ ಹೆಚ್ ಎಂ ರೇಣುಕಾರಾದ್ಯ ದ್ವಜರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಜಿಲ್ಲಾ ಕಾರ್ಯದರ್ಶಿ ರಾದ ಸುಂದರೇಶ್ ದೀಪ ಬೆಳಗಿಸುವ ಮೂಲಕ ಶತಮಾನದ ಸಂಭ್ರಮ ಕಮ್ಯೂನಿಸ್ಟ್ ಪಕ್ಷ 100 ವರ್ಷ ಬೆಳೆದು ಬಂದ ಹಾದಿ ಹೋರಾಟದ ರಾಜಕಾರಣ ,ಅಧಿಕಾರಕ್ಕಿಂತ ಜನರ ಮೂಲಭೂತ ಸಮಸ್ಯೆ ಪರಿಹರಿಸಿ ಜನಹಿತಕ್ಕಾಗಿ ಬೀದಿಯಲ್ಲಿ ಬಡವರ,ಕಾರ್ಮಿಕರ ವಿದ್ಯಾರ್ಥಿ ಯುವಜನರ,ಮಹಿಳೆಯರ ಪರ ಗಟ್ಟಿ ಧ್ವನಿಯಾಗಿ ನಿಂತು 100 ವರ್ಷ ಸಂದಿದೆ ಈ ಸಂದರ್ಭದಲ್ಲಿ ನಮ್ಮ ಹಿರಿಯರ ತ್ಯಾಗ ಬಲಿದಾನ ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದರು.
ಧ್ವಜಾರೋಹಣ ನೆರವೇರಿಸಿದ ರೇಣುಕಾರಾಧ್ಯ ಮಾತನಾಡಿ ಮೂಡಿಗೆರೆಯಲ್ಲಿ ಪಕ್ಷ ನಡೆಸಿದ ಹೋರಾಟಗಳು ಜಿಲ್ಲೆಯ ಕಾಫೀ ತೋಟದ ಕಾರ್ಮಿಕರು ಅಂದು ನಡೆಸಿದ ನಿರಂತರ ಹೋರಾಟದ ಫಲ ಇಂದು ಇಲ್ಲಿಯ ತೋಟಕಾರ್ಮಿಕರ ಆರ್ಥಿಕ ಸಾಮಾಜಿಕ ಬದಲಾವಣೆಗೆ ಕಾರಣ ಇಲ್ಲಿನ ಕಮ್ಯೂನಿಸ್ಟ್ ಚಳುವಳಿ ಕಾರಣ ಎಂಬುವುದು ಇಂದು ನೆನಪಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ರಮೇಶ್ ಕೆಳಗೂರು ಮಾತನಾಡಿ ಇಂದು ಕಮ್ಯೂನಿಸ್ಟ್ ಚಳುವಳಿ ಮೂಡಿಗೆರೆಯಲ್ಲಿ ಪ್ರಬಲವಾಗಿ ಕಟ್ಟಬೇಕಾದ ಅನಿವಾರ್ಯತೆ ಇದೆ ಇಲ್ಲಿನ ನಿವೇಶನ ರಹಿತರ ಸಮಸ್ಯೆ , ಭೂ ಸಮಸ್ಯೆಗೆ ಮತ್ತೆ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಬೇಕು ನಾವೆಲ್ಲರೂ ಆ ಹಾದಿಯಲ್ಲಿ ದೃಢ ನಿರ್ಧಾರ ಕೈಗೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ನೂತನ ತಾಲ್ಲೂಕು ಸಮಿತಿ ರಚಿಸಲಾಯಿತು. ತಾಲ್ಲೂಕು ಕಾರ್ಯದರ್ಶಿಯಾಗಿ ಬಿ.ಕೆ. ಲಕ್ಷ್ಮಣ್ ಕುಮಾರ್ ಆಯ್ಕೆಯಾಗಿದ್ದಾರೆ. ಸಹಕಾರ್ಯದರ್ಶಿಯಾಗಿ ಗುಂಡಣ್ಣ, ರಾಜು ಬಾನಳ್ಳಿ, ತನಿಯಪ್ಪ ಹಾಡ್ತಾಳ್, ಖಜಾಂಚಿಯಾಗಿ ರಮೇಶ್ ಕೆಳಗೂರು ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ರಘು ಜಿ, ಜಿಲ್ಲಾ ಮಂಡಳಿ ಸದಸ್ಯ ವಿಜಯ್ ಕುಮಾರ್, ಜಗದೀಶ್ ಚಕ್ರವರ್ತಿ, ಸುರೇಂದ್ರ ಹಾಜರಿದ್ದರು.
ಈ ಸಮ್ಮೇಳನದಲ್ಲಿ ಧರ್ಮಸ್ಥಳದಲ್ಲಿ ನಡೆದ ಕೊಲೆ ಪ್ರಕರಣದ ತನಿಖೆ ಮಾಡಲು ಎಸ್ ಐ ಟಿ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಚನೆ ಮಾಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು


