puspa 1

 

 

ಮೂಡಿಗೆರೆ ತಾಲ್ಲೂಕು ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)ಮತ್ತು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಸಹಯೋಗದಲ್ಲಿ ಚಿನ್ನಿಗ -ಜನ್ನಾಪುರ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಪನ್ಯಾಸಮಾಲಿಕೆ ಕಾರ್ಯಕ್ರಮ-2 ಹಾಗೂ ಉಚಿತ ನೋಟ್ ಪುಸ್ತಕ ಲೇಖನಿ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೂಡಿಗೆರೆ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ(ರಿ) ಅಧ್ಯಕ್ಷರಾದ ಬಿ.ಎಸ್ ಓಂಕಾರ್ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು,ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗದೆ ಉತ್ತಮ ಶಿಕ್ಷಣವನ್ನು ಪಡೆಯಬೇಕಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಪುಷ್ಪ ಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತ್ಯದ ಬಗ್ಗೆ ಉಪನ್ಯಾಸ ಹಾಗೂ ನೋಟ್ ಬುಕ್,ಲೇಖನಿ ನೀಡುತ್ತಿರುವುದು ಉತ್ತಮ ಕಾರ್ಯಕ್ರಮ ಶ್ಲಾಘನೀಯ ಎಂದರು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಹಾಗೂ ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಪ್ರಸ್ತಾವಿಕವಾಗಿ ಮಾತನಾಡಿ ಜೀವನ ಮತ್ತು ಸಾಹಿತ್ಯ ಎರಡರಲ್ಲೂ ನಿಕಟ ಸಂಬಂಧವಿದೆ ಸಾಹಿತ್ಯ ಇಲ್ಲದಿದ್ದರೆ ಜೀವನ ನಗಣ್ಯವಾಗಿ ಬಿಡಬಹುದು ಜೀವನದ ಸೊಬಗನ್ನು ಅನುಭವಿಸಲು ಸಾಹಿತ್ಯ ಸಹಕಾರಿಯಾಗ ಬಲ್ಲದು. ಓದಿನೊಂದಿಗೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಜೀವನದಲ್ಲಿ ಉತ್ತಮ ಸಂಸ್ಕಾರಗಳನ್ನು ಕಲಿಯುವುದರ ಮೂಲಕ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದರು.

ಉಪನ್ಯಾಸ ಮಾಲಿಕೆ -2 ರಲ್ಲಿ ಸಾಹಿತ್ಯ ಅಭಿರುಚಿಯಲ್ಲಿ ಶಿಕ್ಷಣದ ಏಳಿಗೆ ವಿಷಯದ ಬಗ್ಗೆ ಸಾಹಿತಿಗಳಾದ ಡಾ. ಬಿ.ಶಿವಶಂಕರ್ (ಶೃಂಗೇರಿ ಶಿವಣ್ಣ) ಉಪನ್ಯಾಸ ನೀಡಿದರು, ಅಜ್ಞಾನ ಮತ್ತು ನಿಗೂಢ ಜಗತ್ತನ್ನು ಅರಿಯಲು ನಿರಂತರ ಓದು ಬೇಕೇ ಬೇಕು. ಕವಿಯ ಸೃಜನ ಶೀಲ ಓದು ಮತ್ತು ಅನುಭವ ಈ ಜಗತ್ತನ್ನು ಮಾನವೀಯ ಅಗಿಸಿದೆ. ಸಾಹಿತ್ಯದ ಮೂಲ ಉದ್ದೇಶವೇ ಮಾನವೀಯ ಬದುಕಿನ ಶೋಧ. ವಿದ್ಯಾರ್ಥಿಗಳು ಸೃಜನಶೀಲ ಚಟುವಟಿಕೆಯ ಜತೆ ಚಿಂತನಾಶೀಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸದಲ್ಲಿ ಶೃಂಗೇರಿ ಶಿವಣ್ಣ ತಿಳಿಸಿದರು.

ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಉಮಾ ಮೋಹನ್ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಸಿದರು.

ಮುಖ್ಯ ಅತಿಥಿಗಳಾದ ಶೃಂಗೇರಿ ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ರಮೇಶ್ ಶೂನ್ಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಸೇವೆ ಮಾಡಿದ ಇಂತಹ ಸಂಘ ಸಂಸ್ಥೆಗಳನ್ನು ಮರೆಯಬಾರದು, ಸಂಸ್ಥೆಯ ಗೌರವವನ್ನು ಎತ್ತರಕ್ಕೇರಿಸುವ ಕಾರ್ಯ ವಿದ್ಯಾರ್ಥಿಗಳು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಣ್ಣಪ್ಪ ಹೆಚ್.ಬಿ ಮಾತನಾಡಿರು.

* ಶೃಂಗೇರಿ ಶಿವಣ್ಣರಿಗೆ ‘ಪುಷ್ಪಗಿರಿ ಜ್ಞಾನ ರತ್ನ’ ಪ್ರಶಸ್ತಿ

ಉಪನ್ಯಾಸ ಮಾಲಿಕೆ-2 ರಲ್ಲಿ ಉಪನ್ಯಾಸ ನೀಡಿದ ಸಾಹಿತಿ. ಡಾ. ಬಿ.ಶಿವಶಂಕರ್ (ಶೃಂಗೇರಿ ಶಿವಣ್ಣ) ರವರಿಗೆ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದವತಿಯಿಂದ “ಪುಷ್ಪಗಿರಿ ಜ್ಞಾನ ರತ್ನ “ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅತಿಥಿಗಳಾದ ಬಿ.ಎಸ್ ಓಂಕಾರ್ ಮತ್ತು ರಮೇಶ್ ಶೂನ್ಯರವರುಗಳನ್ನು ಗೌರವಿಸಲಾಯಿತು.

ಸಮಾಜ ಸೇವೆಕ ಹಸೈನಾರ್ ಮೂಡಿಗೆರೆ, ಅವಿನ್ ಟಿ ವಿಯ ಮಗ್ಗಲಮಕ್ಕಿ ಗಣೇಶ್, ಶಾಲೆಯ ಮುಖ್ಯೋಪಾಧ್ಯಾಯರಾದ ರಾಮು ಬಿ ಬಿ,ಶಿಕ್ಷಕರಾದ ತ್ರಿವೇಣಿ,ಸೋಮಶೇಖರ್,ನಾಗರಾಜ್,ಗೌರವ ಟ್ರಸ್ಟಿ.ಸಿ ಸಿ.ರಾಜಣ್ಣ, ಟ್ರಸ್ತಿ ಬಾಂಧವ್ಯ ಮೋಹನ್,ಡಿಂಪಲ್ ಮೋಹನ್,ಭಾವನಾ,ಮಾನ್ಯ, ಆಶಾ ಜಯಕುಮಾರ್ ಪ್ರಾರ್ಥನೆ ನೆರವೇರಿಸಿ, ಜೇಸಿ ಬಿ.ಎಂ ಜಗತ್,ಅಧ್ಯಕ್ಷರು ಜೇಸಿಐ ಗೋಣಿಬೀಡು ಹೊಯ್ಸಳ ಇವರು ಸ್ವಾಗತಿಸಿ,ಸಮೂಹ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಪುರುಷೋತ್ತಮ್ ವಂದನಾರ್ಪಣೆ ನೆರವೇರಿಸಿದರು,ಶಿಕ್ಷಕ ಶೇಖರಗೌಡ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ