ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮೂಡಿಗೆರೆ ಲಿಜನ್ ಹಾಗೂ ಕಸ್ತೂರಿಬಾ ಗಾಂಧಿ ಟ್ರಸ್ಟ್ (ರಿ) ಭಾರತಿಬೈಲ್ ಇವರ ಸಂಯೋಗದೊಂದಿಗೆ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀಕೃಷ್ಣವೇಷಧಾರಿಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ನಿರ್ದೇಶಕರಾಗಿ ರವಿಶಂಕರ್ ಕನ್ನಗೆರೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಹೆಚ್. ಆರ್. ಅಧ್ಯಕ್ಷತೆ ವಹಿಸಿದ್ದರು.
ಕಸ್ತೂರಿ ಗಾಂಧಿ ಟ್ರಸ್ಟ್ ನ ಸಂಚಾಲಕರಾದ ಮಧುರ ಅವರು ಶ್ರೀ ಕೃಷ್ಣನ ಆದರ್ಶದ ಕುರಿತಂತೆ ಮಾತನಾಡಿದರು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮೂಡಿಗೆರೆ ಲಿಜನ್ ಕಾರ್ಯದರ್ಶಿ ಬಿ.ಎನ್. ಮನಮೋಹನ್ ವಂದಿಸಿದರು, ಕಾರ್ಯಕ್ರಮದಲ್ಲಿ ಹತ್ತಾರು ಮಕ್ಕಳು, ಪೋಷಕರು, ಗ್ರಾಮಸ್ಥರು ಭಾಗಿಯಾಗಿದ್ದರು.




