ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿ ನಡೆದ 2049ನೇ ಮದ್ಯವ್ಯರ್ಜನ ಶಿಬಿರದ ಸಮರೋಪ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಜನ ಜಾಗೃತಿ ವೇದಿಕೆ ವತಿಯಿಂದ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ವೇದಿಕೆಯ ಜಿಲ್ಲಾ ಸ್ಥಾಪಕ ಅಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿ ರವರು ಮಾತನಾಡಿ ಮದ್ಯಪಾನ ಸಾವಿನ ಸೋಪಾನ, ಮನುಕುಲಕ್ಕೆ ಮದ್ಯಪಾನ ಒಂದು ಶಾಪವಾಗಿದೆ. ಈ ಶಾಪಕ್ಕೆ ಒಳಪಟ್ಟ ಅದೆಷ್ಟೋ ರಾಜ ಮಹಾರಾಜರುಗಳು, ರಾಜಕಾರಣಿಗಳು, ವಿಜ್ಞಾನಿಗಳು ಒಳ್ಳೆಯ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಜನರು ಅವರ ಕುಟುಂಬ ಕೂಡ ಈ ಶಾಪಕ್ಕೆ ಬಲಿಯಾಗಿದ್ದಾರೆ.
ಈ ಶಾಪ ವಿಮೋಚನೆಗಾಗಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಜನ ಜಾಗೃತಿ ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರಗಳನ್ನು ಮಾಡುತ್ತಾ ಸಮಾಜದಲ್ಲಿ ಮದ್ಯಪಾನವನ್ನು ನಿರ್ಮೂಲನೆ ಮಾಡುವ ಸಲುವಾಗಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಈ ಮಹಾ ಯಜ್ಞದಲ್ಲಿ ಎಲ್ಲರೂ ಪಾಲ್ಗೊಂಡು ಈ ಸಮಾಜಕ್ಕೆ ತಟ್ಟಿರುವ ಶಾಪದ ವಿಮೋಚನೆಗಾಗಿ ಪ್ರಯತ್ನಪಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಶೈಲ ಶಾಖ ಮಠದ ಮರುಳ ಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ ದುಶ್ಚಟಗಳು ಮನುಷ್ಯನ ವಿಕಸನಕ್ಕೆ ತೊಂದರೆಯನ್ನು ಕೊಡುತ್ತದೆ. ಇದರಿಂದ ಕುಟುಂಬದ ನಾಶ ಸಮಾಜದ ನಾಶ ಕೂಡ ಆಗುತ್ತದೆ, ಆ ಕಾರಣ ಎಲ್ಲರೂ ಮಾದಕ ವಸ್ತುಗಳನ್ನು ತ್ಯಜಿಸಬೇಕೆಂದು ಕರೆ ನೀಡಿದರು.
ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಮಾತನಾಡಿ ಒಳ್ಳೆಯ ಸಂಸ್ಕಾರಗಳು ಮನುಷ್ಯರನ್ನು ಒಳ್ಳೆಯ ಸ್ಥಿತಿಗೆ ಕೊಂಡೋಗುತ್ತದೆ ಹಾಗಾಗಿ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಿಕೊಳ್ಳಲು ಸಲಹೆಯನ್ನು ನೀಡಿದರು.
ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಚಂದ್ರಪ್ಪನವರು ಮಾತನಾಡುತ್ತಾ ಶ್ರೀ ಕ್ಷೇತ್ರದಿಂದ ಪೂಜ್ಯರು ಮಾಡುತ್ತಿರುವ ಸಮಾಜಮುಖಿ ಕೆಲಸಗಳನ್ನು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೇಶವಮೂರ್ತಿ ರವರು ಶಿಬಿರಾರ್ಥಿಗಳ ಬಾಳು ಶುಭವಾಗಲಿ ಎಂದು ಹಾರೈಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ ಕೃಷ್ಣಮೂರ್ತಿ, ಅಜ್ಜಂಪುರದ ಶಿವಾನಂದ್, ಪಟ್ಟಣ ಪಂಚಾಯಿತಿ ಸದಸ್ಯ ಜೋಗಿ ಪ್ರಕಾಶ್, ನಟರಾಜ್ ಹಾಗೂ ಇನ್ನಿತರರಿದ್ದರು.



