ಬಣಕಲ್ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ನಡೆದ ಬಣಕಲ್ ಬಾಳೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢ ಶಾಲೆ ಕೊಟ್ಟಿಗೆಹಾರದ ವಿದ್ಯಾರ್ಥಿಗಳು ಅದ್ದೂರಿ ಸಾಧನೆ ದಾಖಲಿಸಿದ್ದಾರೆ. ಗಂಡು ಹಾಗೂ ಹೆಣ್ಣು ವಿದ್ಯಾರ್ಥಿಗಳು ಸಮಾನವಾಗಿ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಎತ್ತಿದ್ದಾರೆ.
ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡಾವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿ, ಕೊಟ್ಟಿಗೆಹಾರದ ವಿದ್ಯಾರ್ಥಿಗಳು ಒಟ್ಟು 9 ಪ್ರಥಮ, 7 ದ್ವಿತೀಯ ಹಾಗೂ 3 ತೃತೀಯ ಸ್ಥಾನಗಳು ಗಳಿಸಿ 19 ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಪರವಾಗಿ ಅಭಿನಂದನೆ ಸಲ್ಲಿಸಲಾಗಿದ್ದು, ನಿರಂತರವಾಗಿ ತರಬೇತಿ ನೀಡಿದ ಹಿರಿಯ ಶಿಕ್ಷಕರಾದ ಶಿವರಾಮ್ ಅವರಿಗೆ ವಿಶೇಷ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ತಿಳಿಸಲಾಯಿತು.
ಮುಂದಿನ ಹಂತವಾಗಿ ನಡೆಯಲಿರುವ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೆ ಭಾಗವಹಿಸಲು ಅವಕಾಶ ದೊರೆತಿದೆ.
ಶಾಲೆಯ ಸಾಧನೆಗೆ ಶಿಕ್ಷಕರಾದ ಶಿವರಾಮ್, ಶೈನಿ, ಮೇಘನ, ಕಿರಣ್ ಹಾಗೂ ಸತೀಶ್ ಅವರ ಪ್ರೋತ್ಸಾಹವೂ ಕಾರಣವಾಗಿದ್ದು, ಸ್ಪರ್ಧೆಯ ಅವಧಿಯಲ್ಲಿ ಕೊನೆತನಕ ವಿದ್ಯಾರ್ಥಿಗಳ ಜೊತೆ ನಿಂತು ಪ್ರೋತ್ಸಾಹ ನೀಡಿರುವುದು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.




