November 1, 2026
;
IMG_20250920_114510

 

 

ಮೂಡಿಗೆರೆ ತಾಲ್ಲೂಕಿನ ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ಸಾಲಿಗೆ 60.19 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್.ನಾರಾಯಣ್ ಗೌಡ ಹೇಳಿದರು.
ಅವರು ಶನಿವಾರ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ  ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 129 ಸಹಕಾರ ಸಂಘಗಳಿದ್ದು ಅದರಲ್ಲಿ ಬಣಕಲ್ ಸಹಕಾರ ಸಂಘ ಉತ್ತಮ ಸಾಧನೆ ಮಾಡಿದೆ.  ಸದಸ್ಯರಿಗೆ ಕೆಸಿಸಿ ಬೆಳೆ ಸಾಲ 19.80 ಕೋಟಿ ಸಾಲ ನೀಡಿದೆ. ಕೃಷಿಯೇತರ ಸಾಲ ರೂ 38.14 ಕೋಟಿ 1966 ಸದಸ್ಯರಿಗೆ ನೀಡಿದೆ. ಈ ಬಾರಿ ಸರ್ವ ಸದಸ್ಯರಿಗೆ ಶೇ 10 ಡಿವಿಡೆಂಟ್ ಅನ್ನು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ನೂತನ ಹಾಲ್ ಕಟ್ಟಡ ನಿರ್ಮಾಣ ಮಾಡಲು ಬಳಸಲಾಗುತ್ತದೆ. ಸಂಘದಲ್ಲಿ 28ಕೋಟಿ ಡಿಪಾಸಿಟ್ ಇಡಲಾಗಿದೆ. ಜಿಲ್ಲಾ ಬ್ಯಾಂಕಿನಲ್ಲಿ 7ಕೋಟಿ ಹೂಡಿಕೆ ಮಾಡಲಾಗಿದೆ.ಎಂದರು.
ಗ್ರಾಮದ ಹಿಯರಾದ ಬಿ.ಶಿವರಾಮ ಶೆಟ್ಟಿ ಮಾತನಾಡಿ’ ಸಂಘವು 173 ಕೋಟಿ ವ್ಯವಹಾರ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಉತ್ತಮ ಕಟ್ಟಡಕ್ಕೆ ಹಾಲ್ ಅಗತ್ಯವಾಗಿದ್ದು  ಅದಕ್ಕೆ ಸರ್ವ ಸದಸ್ಯರ ಡಿವಿಡೆಂಟ್ ನೀಡಲು ಮನವಿ ಮಾಡಿದರು. ಬರುವ ವರ್ಷ ಶೇ15 ಡಿವಿಡೆಂಟ್ ಏರಿಕೆ ಮಾಡುವಂತೆ ಆಗ್ರಹಿಸಿದರು.
ನಿರ್ದೇಶಕರಾದ ಟಿ.ಎಂ.ಗಜೇಂದ್ರ, ಬಿ.ಎಂ.ಭರತ್, ಎ.ಬಿ.ನಾಗೇಶ್ ಗೌಡ, ಬಿ.ಎಸ್.ಕಲ್ಲೇಶ್, ಬಿ.ಎಸ್.ವಿಕ್ರಂ, ಎ.ಆರ್.ಅಭಿಲಾಷ್  ಮಾತನಾಡಿದರು. ನೆಸ್ಲೆ ಕಂಪನಿಯ ಶಿವಕುಮಾರ್, ಸತೀಶ್ ಅವರು ಜೇನು ನೊಣ ಸಂತತಿ ಹೆಚ್ಚಿಸುವಿಕೆ ಹಾಗೂ ಕೃಷಿ ಗೊಬ್ಬರದ ಬಗ್ಗೆ ರೈತರಿಗೆ  ಸಲಹೆ ನೀಡಿದರು.
ಸಂಘದ ಸಿಇಒ ಜಿ.ಬಿ.ನಿಶಾಂತ್ ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸಂಘದ ಉಪಾಧ್ಯಕ್ಷ ರಂಗನಾಥ್, ನಿರ್ದೇಶಕರಾದ ಎ.ಆರ್.ಅಭಿಲಾಷ್, ಜಿ.ಬಿ.ಲಕ್ಷ್ಮಿ, ಎಚ್.ಕೆ.ಮಮತ, ಬಿ.ಎಂ.ರವೀಂದ್ರ, ಬಿ.ಬಿ.ಶರತ್, ಕೆ.ಕೆ.ಯತೀಶ್, ಬಿ.ಕೆ.ಚಂದ್ರೇಗೌಡ, ಸಿಡಿಸಿಸಿ ಮೇಲ್ವಿಚಾರಕ ಯು.ಸಿ.ಪ್ರಯಾಗ್  ಇದ್ದರು

 

 

Leave a Reply

Your email address will not be published. Required fields are marked *